ಇಂದು ಕಿಶೋರಿ ಮೇಳ ಕಾರ್ಯಕ್ರಮ
ಶಹಾಪುರ: ಸ್ಥಳೀಯ ಸರ್ಕಾರಿ ಸಂಯುಕ್ತ ಬಾಲಕೀಯರ ಪ.ಪೂ.ಕಾಲೇಜಿನ(ಪ್ರೌಢಶಾಲಾ ವಿಭಾಗದಲ್ಲಿ) ಬಾಲಕಿಯರಿಗಾಗಿ ಕಿಶೋರಿ ಮೇಳ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಸಾಲಿಮನಿ ವಹಿಸುವರು. ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಯಪ್ಪ ರೆಡ್ಡಿ ನೆರವೇರಿಸುವರು. ಉಪನ್ಯಾಸವನ್ನು ಬಸ್ಸಮ್ಮ ವಕೀಲರು, ಡಾ. ಸುಹಾಸಿನಿ ಡಿ. ಚಿಕ್ಕಮಠ, ಡಾ. ಶ್ರೀದೇವಿ ನೀಡುವರು. ಕಾರ್ಯಕ್ರಮದಲ್ಲಿ ಟಿಎಲ್ಸಿ ಸಂಯೋಜಕರಾದ ಮಂಜುಳಾ.ಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾನುಬಿ, ಹಲೀಮಾ ಉಪಸ್ಥಿತರಿರುವರು ಎಂದು ಉಪಪ್ರಾಚಾರ್ಯ ನಾಗರತ್ನಮ್ಮ.ಪಿ. ಓಲೇಕಾರ ತಿಳಿಸಿದ್ದಾರೆ.