ಕೋರಿಸಿದ್ಧೇಶ್ವರರ ಪುರಾಣ ಪ್ರಾರಂಭ
ಕೆಂಭಾವಿ: ಕೋರಿಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಕಂಠಿ ಹನುಮಂತ ದೇವರ 15ನೇ ಜಾತ್ರಾ ಮಹೋತ್ಸವದ ಅಂಗವಾಗಿ ರುದ್ರಮುನಿ ಶಿವಾಚಾರ್ಯ ಯಡ್ರಾಮಿ ಇವರಿಂದ ಕೋರಿಸಿದ್ಧೇಶ್ವರರ ಪುರಾಣ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಮಲ್ಲಿಕಾರ್ಜುನ ದೇವರು, ನಾಗಣ್ಣ ಸಾಹು ದಂಡಿನ, ಗಿರೀಶ ರೆಡ್ಡಿ ಹೊಟ್ಟಿ, ಬಸವರಾಜಗೌಡ ಬಮ್ನಳ್ಳಿ, ಸಿದ್ಧನಗೌಡ ಪಾಟೀಲ, ಭೀಮಣ್ಣ, ಯಂಕಾರಡ್ಡಿ ದೇಸಾಯಿ, ಇದ್ದರು. ಮಲ್ಲಯ್ಯ ಸ್ವಾಮಿ ವಡಿಗೇರಿ, ಸೋಮಶೇಖರ ಪತ್ತಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.