ಜೀರ್ಣೋದ್ಧಾರ; 3 ಲಕ್ಷ ಮಂಜೂರು
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉದನೂರ ತಾಂಡಾದ ಜೈ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 2011-12ನೇ ಸಾಲಿನ ಧಾರ್ಮಿಕ ದತ್ತಿ ಯೋಜನೆಯಡಿಯಲ್ಲಿ 3 ಲಕ್ಷ ಮಂಜೂರಾಗಿದ್ದು, ಅದರಲ್ಲಿ ಮೊದಲ ಕಂತಿನ 1.50 ಲಕ್ಷ ಚೆಕ್ನ್ನು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಗುಲ್ಬರ್ಗ ತಹಸೀಲ್ದಾರ್ ಸಮ್ಮುಖದಲ್ಲಿ ಸಮಿತಿಯ ಅಧ್ಯಕ್ಷ ಹಣಮಂತ ಚವ್ಹಾಣ ಅವರಿಗೆ ವಿತರಿಸಿದರು. ಗ್ರಾಮಸ್ಥರಾದ ನಾಗೇಂದ್ರಪ್ಪ ಮೂಲಗೆ, ಶರಣಬಸಪ್ಪ ಮೂಲಗೆ, ಮಲ್ಲಿಕಾರ್ಜುನ ಮಾಲಿಪಾಟೀಲ್, ಶರಣಬಸಪ್ಪ ಪೊಲೀಸ್ ಪಾಟೀಲ್ ಇದ್ದರು.