'ಪವಿತ್ರ ಜೀವನಕ್ಕೆ ಭಗವದ್ಗೀತೆ ಓದಿ'
ಗುಲ್ಬರ್ಗ: ಭಗವದ್ಗೀತೆ ಕೇವಲ ಆಧ್ಯಾತ್ಮಿಕವಾಗಲಿ ಅಥವಾ ಒಂದು ಜಾತಿ ಮತ್ತು ಪಂಥಕ್ಕಾಗಲಿ ಸೀಮಿತವಲ್ಲ. ಅದು ಪ್ರತಿಯೊಬ್ಬರ ಜೀವನ ರೂಪಿಸುವ ಒಂದು ಮೌಲಿಕ ಗ್ರಂಥವಾಗಿದೆ. ಇದನ್ನು ಪ್ರತಿಯೊಬ್ಬರೂ ಓದಿ ತಮ್ಮ ಜೀವನ ಪರಿಶುದ್ಧ ಮತ್ತು ಪವಿತ್ರಗೊಳಿಸಿಕೊಳ್ಳಬೇಕು ಎಂದು ಕೇಂದ್ರೀಯ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಕೃಷ್ಣ ಕಾಕಲವಾರ ಹೇಳಿದರು.
ನಗರದ ರೋಟರಿ ಕ್ಲಬ್ ಏರ್ಪಡಿಸಿದ್ದ ಗೀತ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪತ್ರಕರ್ತ ದೇವು ಪತ್ತಾರ ಮುಖ್ಯ ಅತಿಥಿಗಳಾಗಿ ಮಾತನಾಡಿ, ದಖನ್ ಪ್ರದೇಶದ ಮೇಲೆ ಬೆಳಕು ಚೆಲ್ಲುವ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತಾ ಇದೊಂದು ಕನಕಗಿರಿ ಅಥವಾ ಸುವರ್ಣ ನಗರಿ ಎಂದು ವರ್ಣಿಸಿ ದಕ್ಷಿಣ ಭಾರತ ಚಿನ್ನದಿಂದ ಸಂಪದ್ಭರಿತವಾಗಿತ್ತು. ಆದ್ದರಿಂದಲೇ ಇಲ್ಲಿ ಅಧಿಕ ದಾಳಿ ನಡೆಯಿತೆಂದು ತಿಳಿಸಿದರು. ಪ್ರೊ. ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ವಿಶ್ವನಾಥ ಎಕ್ಕೇಳ್ಳಿ, ವೈಜಯಂತಿ ಮಾಲಾ, ಲತಾ ದೇಶಪಾಂಡೆ, ಡಾ. ರಮೇಶ ಯಳಸಂಗಿಕರ್ ಹಾಗೂ ಶ್ರೀನಿವಾಸ ಉಪಸ್ಥಿರಿದ್ದರು.