ಬೈಕ್ಗೆ ಟ್ಯಾಂಕರ್ ಡಿಕ್ಕಿ; ಇಬ್ಬರ ಸಾವು
ಗುಲ್ಬರ್ಗ: ಟ್ಯಾಂಕರ್ ಮತ್ತು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ಚಿತ್ತಾಪುರ- ಯಾದಗಿರಿ ಹೆದ್ದಾರಿಯ ಹಲಕರ್ಟಿ ಸಮೀಪದ ಬುಧವಾರ ಬೆಳಗ್ಗೆ ನಡೆದಿದೆ.
ಹಲಕರ್ಟಿ ಗ್ರಾಮದ ಮೋನಪ್ಪ ಹಲಕರ್ಟಿ(25), ಸೇಡಂನ ಶರಣಪ್ಪ (26) ಮೃತರು. ಹಲಕರ್ಟಿ ಗ್ರಾಮದ ಮಲ್ಲು ಹಲಕರ್ಟಿ ಗಂಭೀರ ಗಾಯಗೊಂಡಿದ್ದು, ವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬೈಕ್ ಮೇಲೆ ಹಲಕರ್ಟಿ ಕಡೆಗೆ ಹೋಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಹಲಕರ್ಟಿ ಗ್ರಾಮದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇದೇ ಮಾರ್ಗದಲ್ಲಿ ಹೊರಟಿದ್ದ ಚಿತ್ತಾಪುರ ಶಾಸಕ ಪ್ರಿಯಾಂಕ್, ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಡಿಎಸ್ಪಿ ಮಹೇಶ ಮೇಘಣ್ಣನವರ, ಸಿಪಿಐ ಶಂಕರಗೌಡ ಪಾಟೀಲ್, ಪಿಎಸ್ಐ ನಟರಾಜ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.