ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯೋಗದಿಂದ ರೋಗ ಮುಕ್ತಿ: ಕಣವಿ

Mainashree
Updated On : 19 Dec 2013, 11:24 am

ಗುರುಮಠಕಲ್: ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮಹತ್ವದ್ದು ಅದನ್ನು ಕಾಪಡಿಕೊಳ್ಳಲು, ರೋಗದಿಂದ ಮುಕ್ತಿ ಪಡೆಯಲು ಮದ್ದು ಯೋಗದಲ್ಲಿದೆ ಎಂದು ಯೋಗ ಮಾರ್ಗದರ್ಶಕ ಚನ್ನವೀರ ಕಣವಿ ಹೇಳಿದರು.
ಅವರು ಪಟ್ಟಣದಲ್ಲಿ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ವತಿಯಿಂದ ಆಯೋಜಿಸಿದ 4 ದಿನಗಳ ಜೀವನ ಕಲೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಏಕಾಗ್ರತೆ, ಆತ್ಮವಿಶ್ವಾಸ ಜೊತೆಗೆ ಪ್ರಾಮಾಣಿಕತೆ, ನಿಸ್ವಾರ್ಥತೆ, ವಿನಯದ ಜೊತೆಗೆ ಶಿಸ್ತುಬದ್ಧ ನಡವಳಿಕೆ ರೂಪುಗೊಳ್ಳುತ್ತದೆ.
ಜಾಗೃತ: ಸಮಾಜಕ್ಕಾಗಿ ಕಾರ್ಯ ನಿರ್ವಹಿಸುವ ಅದ್ಬುತ ಶಕ್ತಿ ಮಾನವನಲ್ಲಿ ಆಡಗಿದೆ. ಅದನ್ನು ಜಾಗೃತಗೊಳಿಸುವ ಕೆಲಸ ಯೋಗ ಮಾಡುತ್ತದೆ ಎಂದರು. ಸದಾ ಧನಾತ್ಮಕವಾಗಿ ಆಲೋಚಿಸಿದರೆ ಕಷ್ಟಗಳಲ್ಲಿ ಸಹ ಆನಂದಮಯವಾಗುತ್ತದೆ. ಜೀವನ ಕಳೆಯಲು ಕಲೆ ರೂಢಿಗತವಾಗುತ್ತದೆ. ನಮ್ಮ ಭಾವನೆಗಳನ್ನು ಪರಿಶುದ್ಧವಾಗಿಸಿಕೊಳ್ಳಬೇಕು. ತಂದೆ ತಾಯಿಗಳ, ಗುರುಗಳ ಸೇವೆ ಮಾಡಿದರೆ, ಜೀವನ ಸಾರ್ಥಕವಾಗುತ್ತದೆ. ಉತ್ತಮ ವಿಚಾರಗಳು, ಉತ್ತಮ ಆಹಾರ ಮತ್ತು ನಿರಂತರ ಯೋಗದಿಂದ ದೇಶ ದೇಶಗಳು ಶಾಂತಿ, ಸಹಬಾಳ್ವೆಯಿಂದ ಇರಲು ಸಾಧ್ಯ ಎಂದು ವಿವರಿಸಿದರು.
ಯೋಗಾಭ್ಯಾಸ ನಿರಂತರವಾಗಿರಲಿ: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಎಸ್.ಎಂ. ಭೂತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯೋಗ ಎಂಬುದು ಒಂದೇ ಧರ್ಮಕ್ಕೆ ಸೀಮಿತವಾದ್ದದ್ದಲ್ಲ. ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಅಳವಡಿಸಿಕೊಳ್ಳಬೇಕು. ಕೇವಲ ಶಿಬಿರಗಳಲ್ಲಿ ಕಳಿತು ಶಿಬಿರಗಳಲ್ಲೇ ಯೋಗ ಅಭ್ಯಾಸ ಮುಕ್ತಾಯಗೊಳಿಸದೆ, ತಮ್ಮ ಶಾಲೆಗಳಲ್ಲಿ ದಿನನಿತ್ಯ ಸಂಜೆ ಯೋಗ ಮಾಡಬೇಕು ಎಂದು ದೈಹಿಕ ಶಿಕ್ಷಕರಿಗೆ ಕಿವಿ ಮಾತು ನುಡಿದರು.
ಪ್ರಯೋಗ ಪ್ರತಿಷ್ಠಾನ ಕಾರ್ಯದರ್ಶಿ ಎಂ.ಬಿ. ನಾಯಕನ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಪ್ಪ ಪಾಟೀಲ್, ಶಿಕ್ಷಕ ಶರಣಪ್ಪ ಭೂಮಾ, ಯೋಗ ಶಿಕ್ಷಕಿ ಜ್ಯೋತಿ, ಪ್ರವೀಣ ಕುಮಾರ್ ಇದ್ದರು. ಶಿಬಿರಾರ್ಥಿ ಲೊಕೇಶ ಪ್ರಾರ್ಥಿಸಿದರು. ರುಕ್ಷ್ಮಯ್ಯ ಸ್ವಾಗತಿಸಿ, ಶಿಕ್ಷಕಿ ಮಲ್ಕಮ್ಮ ರಾಣೆ ನಿರೂಪಿಸಿದರು.
4 ದಿನಗಳ ಶಿಬಿರದಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕಾಕಲವಾರ್ ಬೇಸ್  ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement