ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಕ್ತದಾನ; ಜೀವ ಉಳಿಸಿದ ಸಂತೃಪ್ತಿ

Mainashree
Updated On : 19 Dec 2013, 11:23 am

ಶಹಾಪುರ:ಆಕಸ್ಮಿಕ ಅಪಘಾತ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅಪಾಯದಲ್ಲಿರುವವರಿಗೆ ರಕ್ತದಾನ ಮಾಡುವದರಿಂದ ವ್ಯಕ್ತಿಯೊಬ್ಬನ ಜೀವ ಉಳಿಸಿದ ಸಂತೃಪ್ತಿ ಬರುತ್ತದೆ. ಇದೊಂದು ಶ್ರೇಷ್ಠ ಕಾರ್ಯ ಎಂದು ಜಿಪಂ ಸದಸ್ಯ ಹನುಮೇಗೌಡ ಮರಕಲ್ ತಿಳಿಸಿದರು.
ಕೃತಕ ರಕ್ತ ಇಲ್ಲ: ಲಯನ್ಸ್ ಕ್ಲಬ್ ಆಫ್ ಶಹಾಪುರ ಮತ್ತು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಚಾಲನೆ ನೀಡಿ ಮಾತನಾಡಿದ ಅವರು ಜಗತ್ತಿನಲ್ಲಿ ವಿಜ್ಞಾನದ ಪ್ರಗತಿ ಸಾಕಷ್ಟು ಸಾದಿಸಿದ್ದರೂ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಈವರೆಗೂ ಸಾಧ್ಯವಾಗಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಗಂಗಾಧರ ಚಟ್ರಕಿ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ರಕ್ತವನ್ನು ಆಗಾಗ ನೀಡುತ್ತಿರಬೇಕು.  ಇದರಿಂದ ಕಳೆದುಕೊಳ್ಳುವುದೇನೂ ಇಲ್ಲ. ರಕ್ತ ಮೂರು ತಿಂಗಳೊಳಗಾಗಿ ಮತ್ತೆ ನಿಗದಿತ ಪ್ರಮಾಣಕ್ಕೆ ತಲಪುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಜಗದೀಶ ಉಪ್ಪಿನ್, ಸರ್ಕಾರಿ ವೈದ್ಯಾಧಿಕಾರಿ ಡಾ. ಅನೀಲಕುಮಾರ, ಸಿದ್ದಪ್ಪ ಧೋತ್ರೆ, ಬಸವರಾಜ ತುಂಬಗಿ, ಮಲ್ಲಿಕಾರ್ಜುನ ಯಕ್ಷಿಂತಿ, ಮಲ್ಲಿಕಾರ್ಜುನ ಕಾಡಂಗೇರಾ, ಡಾ.ಆರತಿ, ಕಾಶಿಬಾಯಿಧೋತ್ರೆ  ವೇದಿಕೆಯಲ್ಲಿದ್ದರು.
 ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುಲಿಂಗಯ್ಯ ಸಾಲಿಮಠ, ದೇವಿಂದ್ರಪ್ಪ ಬಿರದಾರ, ಆರ್.ಪ್ರಕಾಶರಾಜ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಶಂಕರಗೌಡ ಯಾಳವಾರ ನಿರೂಪಿಸಿ, ಬಂದೀಶ ವಂದಿಸಿದರು. ಈ ಸಂದರ್ಭದಲ್ಲಿ 18 ಜನ ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement