ಲಾರಿ ಅಪಹರಣ
ಗುಲ್ಬರ್ಗ: ಜೇವರ್ಗಿ ಹೊರವಲಯದ ಚಿಗರಳ್ಳಿ ಕ್ರಾಸ್ ದಾಟಿ ಕಂಪ್ಲಿ ಕಡೆ ತೊಗರಿ ಬೇಳೆಯನ್ನು ಸಾಗಿಸುತ್ತಿದ್ದ ಲಾರಿಯನ್ನು ಬುಧವಾರ ಬೆಳಗಿನ ಜಾವ 1.30ರ ಸುಮಾರಿಗೆ ತಡೆದ 6 ಜನ ದರೋಡೆಕೋರರು 8.50 ಲಕ್ಷ ಮೌಲ್ಯದ ಲಾರಿ ಸಮೇತ 10 ಟನ್ ತೊಗರಿ ಬೇಳೆಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.
ಗುಲ್ಬರ್ಗದ ಮಹೆಬೂಬ್ ಪಟೇಲ್ ಎಂಬುವವರು 10 ಟನ್ ತೊಗರಿ ಬೇಳೆಯನ್ನು ತೆಗೆದುಕೊಂಡು ಕಂಪ್ಲಿಗೆ ಹೋಗುತ್ತಿದ್ದಾಗ ಟವೇರಾದಲ್ಲಿ ಬಂದ ಆಗಂತುಕರು ಲಾರಿ ತಡೆದು ಮಹೆಬೂಬ್ಗೆ ಬೆದರಿಸಿ ಲಾರಿ ಮತ್ತು ತೊಗರಿ ಬೇಳೆ ಅಪಹರಿಸಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಎಸ್ಪಿ ಅಮೀತಸಿಂಗ್, ಗ್ರಾಮೀಣ ಎಎಸ್ಐ ಸಂತೋಷ ಬಾಬು, ಜೇವರ್ಗಿ ಸಿಪಿಐ ಬಾಸು ಚವ್ಹಾಣ, ಪಿಎಸ್ಐ ಸುಧೀರ ಬೆಂಕಿ ಹಾಗೂ ಸಿಬ್ಬಂದಿ ಭೇಟಿ ಪರಿಶೀಲಿಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.