ವಾರಾಬಂದಿ ನಿಯಮ ಉಲ್ಲಂಘನೆ
ಶಹಾಪುರ: ರೈತರ ಹಿತ ಕಾಯಲು ಸರ್ಕಾರ ಹಲವಾರು ಆಶ್ವಾಸನೆಗಳನ್ನು ನೀಡುತ್ತಿವೆ. ಆದರೆ ಮತ್ತೊಂದೆಡೆ ಅಧಿಕಾರಿಗಳು ರೈತರ ಬಗ್ಗೆ ಬೇಜವಾಬ್ದಾರಿ ನಿಲುವು ಅನುಸರಿಸುತ್ತಿದ್ದಾರೆ. ಕೆಬಿಜೆಎನ್ಎಲ್ಗೆ ಸಂಬಂಧಿಸಿದಂತೆ ಮೂಡಬೂಳ ಬ್ರ್ಯಾಂಚ್ ಕಾಲುವೆ (ಎಂಬಿಸಿ)ಗೆ ವಾರಬಂದಿ ನಿಯಮವಿದ್ದರೂ, ಅಧಿಕಾರಿಗಳು ಕಾಳಜಿ ತೊರುತ್ತಿಲ್ಲ. ಈಗಾಗಲೇ 16ನೇ ದಿನಾಂಕಕ್ಕೆ ನೀರು ಬರಬೇಕಾಗಿತ್ತು.
ಆದರೆ ನೀರು ಕಾಲುವೆಗೆ ಬರುವ ಸುಳಿವೇ ಇಲ್ಲದಂತಾಗಿದೆ. ಶೇಂಗಾ, ಬೇಳೆ ಮತ್ತು ಜೋಳ, ಹತ್ತಿ ಚಿಗುರೊಡೆಯುವದಕ್ಕೆ ಸದ್ಯ ನೀರಿನ ಅವಶ್ಯಕತೆ ಇದ್ದು ಅಧಿಕಾರಿಗಳು ನೀರು ನಿರ್ವಹಣೆಯಲ್ಲಿ ಪಾರದರ್ಶಕತೆ ತೋರುತ್ತಿಲ್ಲ ಎಂದು ಮೂಡಬೂಳ ಗ್ರಾಮದ ರೈತರಾದ ಅಶೋಕರಾವ್ ಮಲ್ಲಾಬಾದಿ, ಮಹಾದೇವಪ್ಪ ಬಬಲಾದಿ, ಶ್ರೀಶೈಲಪ್ಪ ಸಾಹು, ಆರ್ಎಂ. ರಡ್ಡಿ, ವೀರಣ್ಣದೇಸಾಯಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.