ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿತರಣಾ ಕಾಲುವೆಗೆ ಅಡ್ಡಿ; ನೀರು ಸ್ಥಗಿತ

Mainashree
Updated On : 19 Dec 2013, 11:23 am

ಹುಣಸಗಿ:  ಕೃಷ್ಣಾ ಭಾಗ್ಯ ಜಲ ನಿಗಮದ ವಿತರಣಾ ಕಾಲುವೆಯ (ನಂ. 6) ದ್ವಾರದ ಬಳಿ ಕಲ್ಲೊಂದು ಕಾಲುವೆಗೆ ಅಡ್ಡವಾಗಿ ಬಿದ್ದ ಕಾರಣ, ಕಾಲುವೆಯಲ್ಲಿ ಸರಾಗವಾಗಿ ನೀರು ಬಾರದಂತಾಗಿತ್ತು. ಇದರಿಂದ ರೈತರು ತೀವ್ರ ಕಂಗಾಲಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗಮನ ಹರಿಸಿರಲಿಲ್ಲ: ಕೆಲ ದಿನಗಳ ಹಿಂದೆಯೇ ಘಟನೆ ಸಂಭವಿಸಿದ್ದು, ರೈತರಿಗೆ ಆಗ ಅಷ್ಟೇನು ನೀರಿನ ಅಗತ್ಯವಿಲ್ಲದ್ದರಿಂದ ಯಾರು ಕಾಲುವೆಯ ಕಡೆ ಗಮನ ಹರಿಸಿದ್ದಿಲ್ಲ. ಆದರೆ ಇದೀಗ ಮುಂದಿನ ಹಂಗಾಮಿನ ಬತ್ತ ನಾಟಿಗಾಗಿ ನೀರಿನ ಅಗತ್ಯವಿರುವುದರಿಂದ ಪರಿಸ್ಥಿತಿ ಎಲ್ಲರಿಗೂ ಮನವರಿಕೆಯಾಗಿದೆ ಎಂದು ರೈತ ಹೊನ್ನಕೇಶವ ದೇಸಾಯಿ ತಿಳಿಸಿದರು.
ಸದ್ಯ ರೈತರು ನೀರಿನ ದಾಹ ತಾಳದಂತಾಗಿ ಕಷ್ಟಪಟ್ಟು ಮುಖ್ಯ ಕಾಲುವೆಯಿಂದ ಪೈಪ್ ಮೂಲಕ ವಿತರಣಾ ಕಾಲುವೆಗೆ ಹಾಕಿ ನೀರು ಪಡೆಯುತ್ತಿದ್ದಾರೆ.ಆದರೂ ರೈತರಿಗೆ ಸಾಕಾಗುವಷ್ಟು ನೀರು ಬಾರದಂತಾಗಿದೆ.
ಆತಂಕ: ಈ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಕಂಡು ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಪಾದಿಸಿದರು. ಈ ವಿತರಣಾ ಕಾಲುವೆಯಿಂದ ಒಂದು ಸಾವಿರಕ್ಕೂ ಹೆಚ್ಚು ಎಕರೆಗಳಿಗೆ ನೀರುಣಿಸಲಾಗುತ್ತಿದೆ. ಎಲ್ಲರಿಗೂ ಮುಂದಿನ ಹಂಗಾಮಿಗೆ ಬತ್ತ ನಾಟಿ ಮಾಡುವ ಧಾವಂತದಲ್ಲಿರುವುದರಿಂದ ರೈತರು ಆತಂಕಗೊಳ್ಳಲು ಕಾರಣವಾಗಿದೆ. ಕಾಲುವೆ ದ್ವಾರದಲ್ಲಿ ಕಲ್ಲೊಂದು ಅಡ್ಡವಾಗಿದೆ.
  ಅದನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರವೇ ಎಂದಿನಂತೆ ನೀರು ಹರಿಯುವಂತೆ ಮಾಡಲಾಗುವುದೆಂದು ಸ್ಥಳಕ್ಕೆ ಭೇಟಿ ನೀಡಿದ ನಿಗಮದ ಹುಣಸಗಿ ಉಪವಿಭಾಗದ ಎಇ ಅಶೋಕಕುಮಾರ್ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಆರ್.ಎಂ. ರೇವಡಿ, ರೈತ ಮಲ್ಲಣ್ಣ ದೇಸಾಯಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement