ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಗೀತದಿಂದ ಮನಃಶಾಂತಿ

Mainashree
Updated On : 19 Dec 2013, 11:23 am

ಸುರಪುರ: ಸಂಗೀತಕ್ಕೆ ಮಾರುಹೋಗದ ವ್ಯಕ್ತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಸಂಗೀತ ಎಲ್ಲರಿಗೂ ಪ್ರಿಯವಾದದ್ದು. ಸಂಗೀತ ದುಃಖವನ್ನು ದೂರ ಮಾಡಿ ಮಾನಸಿಕ ಶಾಂತಿ ನೀಡುತ್ತದೆ ಎಂದು ಆಕಾಶವಾಣಿ ಕಲಾವಿದ ಶಿವಶರಣಯ್ಯ ಬಳುಂಡಗಿ ಮಠ ಹೇಳಿದರು.
ಸಮೀಪದ ತಿಮ್ಮಾಪೂರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾರ್ತೀಕೋತ್ಸವದ ದೀಪಾರಾಧನೆ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನ ಕಮೀಟಿಯ ಪ್ರಮುಖರಾಧ ಚನ್ನಮಲ್ಲಿಕಾರ್ಜುನ ಗುಂಡಾ, ವೀರಸಂಗಪ್ಪ ಕೊಡೇಕಲ್, ಮಹಾಂತೇಶ ಗಡ್ಡದ್, ಶಿವಶಂಕರ ಅಲ್ಲೂರ್, ರಾಚಪ್ಪ ಜೋತಾ, ಮಹೇಶ ಗೋಗಿ, ಸುರೇಶ ನಾಲವಾರ ಇತರರಿದ್ದರು.  ಮೋಹನ ರಾವು ಮಾಳದಕರ್, ವಿರೂಪಾಕ್ಷಿ ಹೂಗಾರ, ವೆಂಕಟೇಶ ಮಿಠ್ಠಾ, ಚಂದ್ರಹಾಸ ಸಂಗೀತ ಸೇವೆ ನೀಡಿದರು. ರಾಜಶೇಖರ ಗೆಜ್ಜಿ, ಸುರೇಶ ಅಂಬೂರೆ, ಉಮೇಶ ಯಾದವ ತಬಲಾ ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement