ಸುದ್ದಿ ಸಂಕ್ಷೇಪ
'ಏಡ್ಸ್, ಭಯ ಬೇಡ, ಜಾಗ್ರತೆ ಇರಲಿ ಸಾಕು'
ಶಹಾಪುರ: ಏಡ್ಸ್ ರೋಗ ಲಕ್ಷಣಗಳು, ಎಚ್ಚರಿಕೆ ಕ್ರಮಗಳು, ಅದು ಹರಡುವ ರೀತಿಯ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಗಂಗಾಧರ ಚಟ್ರಿಕಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಬಿ. ಗುಡಿ ಕಾಲೇಜಿನಲ್ಲಿ ನಡೆದ ಎನ್‌ಎಸ್‌ಎಸ್ ಹಾಗೂ ರೆಡ್‌ರಿಬ್ಬನ್ ಕ್ಲಬ್ ಆಶ್ರಯದಲ್ಲಿ ನಡೆದ ಏಡ್ಸ್ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸುಶ್ಮಾ ಪ್ರಾರ್ಥನೆ ಮಾಡಿದರು. ಡಾ. ಅಬ್ದುಲ್ ಕರೀಂ, ದೇವೂರ, ಡಾ. ರವೀಂದ್ರನಾಥ ಹೊಸ್ಮನಿ, ಗುಂಡುರಾವ್, ಎನ್ನೆಸ್ಸೆಸ್ ಅಧಿಕಾರಿ ದೇವಿಂದ್ರಪ್ಪ ಇದ್ದರು.ರಾಮು ಸ್ವಾಗತಿಸಿ, ನಾಗರಾಜ ನಿರೂಪಿಸಿ, ಗೋಪ್ಪಣ್ಣ ವಂದಿಸಿದರು.
ಸ್ವಾವಲಂಬನೆಗೆ ಸ್ವಉದ್ಯೋಗ ಸೂಕ್ತ
ಶಹಾಪುರ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡು ಸ್ವಾವನಂಬನೆಗೆ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಿರವಾಳ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಜು ಸಿನ್ಹಾ ಹೇಳಿದರು. ತಾಲೂಕಿನ ಅಣಬಿ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ (ಗೃಹ ಉಪಯೋಗಿ ವಸ್ತುಗಳ ತಯಾರಿಕೆ) ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ಎನ್ಸಿಯುಐನ ಯೋಜನಾಧಿಕಾರಿ ಎಸ್.ಜಿ. ರಾಮಚಂದ್ರ, ಮೇಘಾ, ದೇವಿಪುತ್ರ ಕಟ್ಟಿ, ನಾರಾಯಣರಾವ್ ಮಾತನಾಡಿದರು. 30ಕ್ಕೂ ಹೆಚ್ಚು ಮಹಿಳೆಯರಿಗೆ ವಿವಿಧ ಬಗೆಯ ವಸ್ತುಗಳ ತಯಾರಿಕೆಯ ತರಬೇತಿ ನೀಡಲಾಯಿತು.
'ಜೀವೇಶ್ವರ'ಕ್ಕೆ 19 ಗರಿ
ಶಹಾಪುರ: ಜೀವೇಶ್ವರ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿಯ 19 ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ: ಚಿತ್ರಕಲೆ-ಅನಿಲಕುಮಾರ (ಪ್ರಥಮ), ಕಥೆ - ಮರೆಪ್ಪ (ಪ್ರಥಮ), ಧಾರ್ಮಿಕ ಪಠಣ ಹೀನಾ ಕೌಸರ್ (ದ್ವಿತೀಯ),
ಹಿರಿಯ ಪ್ರಾಥಮಿಕ ಶಾಲೆ: ಚಿತ್ರಕಲೆ-ಅಭಿಷೇಕ (ಪ್ರಥಮ), ಕ್ಲೆ ಮಾಡೆಲಿಂಗ್- ನೀಲಪ್ಪಗೌಡ (ಪ್ರಥಮ), ಕಥೆ ಹೇಳುವುದು- ರಾವುತಪ್ಪಗೌಡ (ದ್ವಿತೀಯ), ದೇಶಭಕ್ತಿಗೀತ-ಶಿವರಾಮ ಹಾಗೂ ಸಂಗಡಿಗರು (ತೃತೀಯ), ಕೋಲಾಟ- ಸುಮಾಲಿ ಹಾಗೂ ಸಂಗಡಿಗರು (ತೃತೀಯ).
ಪ್ರೌಢಶಾಲೆ: ಧಾರ್ಮಿಕ ಪಠಣ (ಸಂಸ್ಕೃತ), ಶರತ್(ಪ್ರಥಮ), ಮಿಮಿಕ್ರಿ; ಶರಣು (ಪ್ರಥಮ), ರಂಗೋಲಿ: ಸ್ನೇಹಾ (ಪ್ರಥಮ), ಸ್ಥಳದಲ್ಲಿ ವಿಜ್ಞಾನದ ಮಾದರಿ ತಯಾರಿಕೆ: ಸುರೇಶಬಾಬು ಮತ್ತು ರಾಜಕುಮಾರ (ಪ್ರಥಮ), ಜಾನಪದ ನೃತ್ಯ: ಜ್ಯೋತಿ ಹಾಗೂ ಸಂಗಡಿಗರು (ಪ್ರಥಮ), ಕ್ಲೆ ಮಾಡ್ಲಿಂಗ್: ಕುತ್ಬುದ್ದಿನ್ (ದ್ವಿತೀಯ), ಜಾನಪದ ಗೀತೆ: ಭಾಗ್ಯ (ತೃತಿಯ), ಛದ್ಮವೇಷ ಮಾರ್ಕಾಂಡೇಶ (ತೃತೀಯ), ಪ್ರಬಂಧ ರಚನೆ: ಶಾರದ (ತೃತಿಯ ಸ್ಥಾನ), ಚರ್ಚಾ ಸ್ಪರ್ಧೆ, ಈರಣ್ಣ (ತೃತಿಯ ಸ್ಥಾನ) 11) ಕ್ವಿಜ್: ಶೋಭಾ, ಪಲ್ಲವಿ, ಸುರೇಶಬಾಬು, ರಾಜಕುಮಾರ (ತೃತಿಯ ಸ್ಥಾನ).
ಇಂದು ತಾಲೂಕು ಪ್ರತಿಭಾ ಕಾರಂಜಿ
ಸುರಪುರ: ಇಲ್ಲಿಯ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಡಿ.19 ಮತ್ತು ಡಿ.20ದಂದು 2013-14ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷ ಶ್ರೀನಿವಾಸಗೌಡ ಪೊಲೀಸ್ ಪಾಟೀಲ್ ಮತ್ತು ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಭಾಗವಹಿಸುವರೆಂದು ಸಾಶಿಇ ಪ್ರಕಟಣೆ ತಿಳಿಸಿದೆ.
ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ: 2013-14 ನೇ ಸಾಲಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಡಿ ಅಲೆಮಾರಿ, ಅರೆ ಮಲೆಮಾರಿ ಅಭ್ಯರ್ಥಿಗಳಿಗೆ ಎನ್‌ಐಎಫ್‌ಟಿ ಬೆಂಗಳೂರು ಸಂಸ್ಥೆ ವತಿಯಿಂದ ಸಿದ್ಧ ಉಡುಪು ಮತ್ತು ಫ್ಯಾಷನ್ ಟೆಕ್ನಾಲಜಿ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ. 25 ಕೊನೆ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.