ಹುಣಸಗಿಯಲ್ಲಿ ಶ್ರೋತೃಗಳ ಮನಸೂರೆಗೊಂಡ ಸಂಗೀತ ಸುಧೆ
ಹುಣಸಗಿ: ಪಟ್ಟಣದ ಹಿರೇಮಠದ ಆವರಣದಲ್ಲಿ ಇತ್ತೀಚೆಗೆ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು. ದೂರದರ್ಶನ ಕಲಾವಿದರಾದ ಗಾಯಕ ಬಸವರಾಜ್ ಬಂಟನೂರ್ ಸಂಗೀತ ಕೇಳುಗರನ್ನು ತಲೆದೂಗುವಂತೆ ಮಾಡಿತು.
ಮುದನೂರು ದೇವರ ದಾಸಿಮಯ್ಯನವರ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಎಂಬ ಕೃತಿಯನ್ನು ರಾಗ ಬೃಂದಾವನಿ ಸಾರಂಗದಲ್ಲಿನ ಹಾಡಿಗಂತೂ ನೆರೆದವರನ್ನು ಮೈ ಮರೆಸಿತು. ರಾಗ ಯಮನ್, ದುರ್ಗ, ಭೂಪ್ ಹಾಗೂ ಪಡದೀಪ್, ಮಧುಕಂಸ, ಮಾಲಕಂಸ, ಬೈರಾಗಿ ಭೈರವ್ ರಾಗಗಳಲ್ಲಿ ಅನೇಕ ವಚನಗಳನ್ನು ಮತ್ತು ಕೀರ್ತನೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಎ.ಎಸ್. ವಠಾರ್, ಆಕಾಶವಾಣಿ ಕಲಾವಿದರಾದ ದೇವೇಂದ್ರ ಕಕ್ಕಳಮೇಲಿ, ವೀರಣ್ಣ ಕಕ್ಕಳಮೇಲಿ, ಗಾಯತ್ರಿ ಬಡಿಗೇರ್, ತಿಮ್ಮಪ್ಪಯ್ಯ ಗವಾಯಿ, ಶಾಂತಗೌಡ ಹೆಬ್ಬಾಳ್ ಮತ್ತಿತರರು ಗಾಯನ ಹಾಡಿದರು. ಆಮಯ್ಯ ಸ್ವಾಮಿ ರಾಜನ ಕೋಳೂರ್ ಹಾರ್ಮೋನಿಯಂ ಮತ್ತು ಯಮನೇಶ್ ಯಾಳಗಿ, ಈಶ್ವರ ಬಡಿಗೇರ್, ವೆಂಕಟಗಿರಿ ದೇಶಪಾಂಡೆ ತಬಲಾ ಸಾಥ್ ನೀಡಿದರು. ಹುಣಸಗಿ ಪಟ್ಟಣದ ಪ್ರಮುಖರಾದ ಮಲ್ಲಿಕಾರ್ಜುಸ್ವಾಮಿ ಹಿರೇಮಠ ಕಾರ್ಯಕ್ರಮ ಆಯೋಜಿಸಿದ್ದರು.