ಕನ್ನಡಿಗ ಅಧ್ಯಕ್ಷರ ನೇಮಿಸಿ: ಕರವೇ
ಯಾದಗಿರಿ: ರಾಜ್ಯ ಸರ್ಕಾರ ಕನ್ನಡ ಬಾರದ ತಮಿಳುನಾಡು ಮೂಲಕ ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ಅವರನ್ನು ನೇಮಕ ಮಾಡಿರುವುದರಿಂದ ಕನ್ನಡದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ವಿಲೇವಾರಿ ಮಾಡಿ ನಿಜವಾದ ನ್ಯಾಯ ಒದಗಿಸಲು ಸಮಸ್ಯೆಯಾಗುತ್ತದೆ. ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾಯಧೀಶ ಎಸ್.ಆರ್. ನಾಯಕ ಅವರು ಆಯೋಗದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನ್ಯಾಯ ಒದಗಿಸಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ನಿಜವಾಗಿ ಅರ್ಥಮಾಡಿಕೊಂಡು ನ್ಯಾಯ ಒದಗಿಸಿಕೊಡಬೇಕಾದರೆ ಕನ್ನಡದಲ್ಲಿ ಕರ್ನಾಟಕ ನಿವೃತ್ತ ನ್ಯಾಯಾಧೀಶರನ್ನು ಕರ್ನಾಟಕದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಕರವೇ ಜಿಲ್ಲಾ ಘಟಕ ಒತ್ತಾಯಿಸಿದೆ. ಈ ಸಂದಂರ್ಭದಲ್ಲಿ ವೆಂಕಟೇಶ ಮಿಲ್ಟ್ರಿ, ರಾಜು ಚವ್ಹಾಣ, ಮಲ್ಲು ವರ್ಕನಳ್ಳಿ, ಭೀಮಾಶಂಕರ ಹತ್ತಿಕುಣಿ, ಅರ್ಜುನ ಪವಾರ, ಅಬ್ದುಲ್ ಚಿಗೆನೋರ, ಬಸವರಾಜ ನಾಯಕ, ಬಸಲಿಂಗಪ್ಪ ನಾಯಕ, ಆನಂದ ಮಿರಿಯಾಳ, ನರೇಂದ್ರ ಯಲಸತ್ತಿ, ಸರ್ದಾರ ಪಟೇಲ್, ದೇವು ಪೂಜಾರಿ, ಹಣಮಂತ ಖಾನಳ್ಳಿ, ನಾಗಪ್ಪ ದೇಸಾಯಿ, ಗೀರಿಶ ನೀಲಹಳ್ಳಿ, ನಾಗರಾಜ ಹಡಪದ ಇದ್ದರು.