ಚಳವಳಿ ಮುನ್ನಡೆಸುವುದೇ ನಿಜ ಗೌರವ: ಶೀಲವಂತ
ಆಳಂದ: ಬುದ್ಧ, ಬಸವ, ಡಾ. ಅಂಬೇಡ್ಕರ್, ಶಾಹು, ಫುಲೆ ಅವರ ಕೈಗೊಂಡ ಚಳವಳಿ ಮುನ್ನಡೆಸುವುದೇ ಅವರಿಗೆ ನೀಡುವ ನಿಜವಾದ ಗೌರವ ಮತ್ತು ಬಹುಜನ ಸಮಾಜದ ಸಾರ್ಥಕತೆ ಅಡಗಿದೆ ಎಂದು ಚಿಂಚೋಳಿ ತಾಲೂಕು ಕಸಾಪ ಅಧ್ಯಕ್ಷ, ಉಪನ್ಯಾಸಕ ಸುಭಾಷ ಶಿಲವಂತ ಅವರು ಹೇಳಿದರು.
ಆಳಂದನ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 57ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಎಚ್ಕೆಇ ಶಿಕ್ಷಣ ಸಂಸ್ಥೆಯ ಇತಿಹಾಸ ಉಪನ್ಯಾಸಕ ಡಾ. ಸುಭಾಷಶ್ಚಂದ್ರ ದೊಡ್ಡಮನಿ ಮಾತನಾಡಿದರು. ಕಾರ್ಯಕ್ರಮವನ್ನು ಪತ್ರಕರ್ತ ಮಹಾದೇವ ವಡಗಾಂವ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇಲಾಖೆ ತಾಲೂಕು ಅಧಿಕಾರಿ ಕಮಲಾಬಾಯಿ ತಮ್ಮನ್, ಕರ್ನಾಟಕ ದಲಿತ ಸೇನೆ ಅಧ್ಯಕ್ಷ ಬಾಬುರಾವ ಅರುಣೋದಯ, ಮುಖಂಡ ದಯಾನಂದ ಶೇರಿಕಾರ, ದತ್ತಪ್ಪ ಹೊನ್ನಳ್ಳಿ ಮಾತನಾಡಿದರು. ಮೇಲ್ವಿಚಾರಕ ಸಂತೋಷ ಶಿಂಧೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಸವರಾಜ ಝಳಕಿ, ಭೀಮಲಿಂಗ ಝಳಕಿ ಮಾತನಾಡಿದರು. ವಿದ್ಯಾರ್ಥಿ ಪ್ರಲ್ಹಾದ ತೀರ್ಥ ನಿರೂಪಿಸಿದರು. ಮೇಲ್ವಿಚಾರಕ ಶಾಂತಪ್ಪ ದೇವರಮನಿ ಸ್ವಾಗತಿಸಿದರು. ಪ್ರವೀಣಕುಮಾರ್ ಕಾಂಬಳೆ ವಂದಿಸಿದರು.