ಜೈಕರವೇಗೆ ಸೇರ್ಪಡೆ
ಗುಲ್ಬರ್ಗ: ಜೈ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯ ಉಪಾಧ್ಯಕ್ಷ ಮಂಜುನಾಥ ಬಿ. ಹಾಗರಗಿ ನೇತೃತ್ವದಲ್ಲಿ ಸಂಘಟನೆಯ ತತ್ವ, ಸಿದ್ಧಾಂತಗಳ ಬಗ್ಗೆ ನಂಬಿಕೆಯಿಟ್ಟು ಸೇರ್ಪಡೆಗೊಳ್ಳುತ್ತಿರುವ ಬಿಜಾಪುರ ಜಿಲ್ಲೆಯ ನೂರಾರು ಕಾರ್ಯಕರ್ತರನ್ನು ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅರುಣಕುಮಾರ್ ಪಾತ್ರೋಟಿ ಅವರನ್ನು ಬಿಜಾಪುರ ಜಿಲ್ಲಾಧ್ಯಕ್ಷರೆಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉತ್ತರ ಕರ್ನಾಟಕ ಅಧ್ಯಕ್ಷ ಲಿಂಗರಾಜ ಅತನೂರ, ಸಿಂದಗಿ ಅಧ್ಯಕ್ಷ ಸಂದೀಪ ಚೌರ್, ಜಗನ್ನಾಥ ಪಟ್ಟಣಶೆಟ್ಟಿ, ಶ್ರೀಕಾಂತ ಆಲೂರ, ಬಿ. ಜಯಸಿಂಗ್, ಸಂದೇಶ ಪವಾರ, ಚಂದ್ರು ಪಾಟೀಲ್, ಶಿವಕುಮಾರ್ ಬಿರಾದಾರ, ನಾಗರಾಜ ಇಂಡಿ ಸೇರಿದಂತೆ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.