ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಿಂಥಣಿ ಮೌನೇಶ್ವರ ಭಾವ್ಯಕ್ಯತೆ ತವನಿಧಿ

Mainashree
Updated On : 20 Dec 2013, 11:05 am

ಸುರಪುರ: ಸಗರ ನಾಡಿನ ಸಂತ ಪರಂಪರೆಯಲ್ಲಿ ತಿಂಥಣಿ ಮೌನೇಶ್ವರರು ವಿಶಿಷ್ಟ ಸಾಧಕರು. ವಿಶ್ವಕರ್ಮ ಜನಾಂಗದಲ್ಲಿ ಜನಿಸಿದ್ದ ಮೌನೇಶ್ವರರು ಜಾತಿ, ಧರ್ಮಗಳನ್ನು ಮೀರಿ ಭಾವೈಕ್ಯತೆ ತವನಿಧಿಯಾಗಿ ಮೆರೆದ ಮಹಿಮಾ ಪುರುಷ ಎಂದು ಯಾದಗಿರಿ ಏಕದಂಡಿಗಿ ಮಠದ ಗುರುನಾಥೇಂದ್ರ ಮಹಾಸ್ವಾಮಿ ಹೇಳಿದರು. ಇಲ್ಲಿಯ ಕಬಾಡಗೇರಾದಲ್ಲಿ ವಿಶ್ವಕರ್ಮ ವಿಕಾಸ ವೇದಿಕೆ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ ಮೌನೇಶ್ವರರ 7ನೇ ವರ್ಷದ ತೊಟ್ಟಿಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಹಾಪೂರ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮಿ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಕೆ.ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಐ.ಸಿ. ಪಂಚಾಳ, ವೀರೇಂದ್ರ ಇನಾಂದಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement