ದೇವಲಗಾಣಗಾಪುರ; ದತ್ತ ಜಯಂತಿ
ಅಫಜಲ್ಪುರ: ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದಲ್ಲಿ ಇಂದು ಶ್ರೀ ದತ್ತ ಮಹಾರಾಜರ ಜಯಂತ್ಯುತ್ಸವ ಲಕ್ಷಾಂತರ ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಸುಕ್ಷೇತ್ರ ದೇವಲಗಾಣಗಾಪುರದಲ್ಲಿ ತೊಟ್ಟಿಲೋತ್ಸವದಲ್ಲಿ ಭಕ್ತರು ದತ್ತಾತ್ರೇಯ ಮಹಾರಾಜರ ಜಯಘೋಷ ಮಾಡಿದರು.
ಸುಕ್ಷೇತ್ರ ದೇವಲಗಾಣಗಾಪುರ ದಕ್ಷಿಣ ಕಾಶೀ ಎಂದೇ ಹೆಸರಾದ ಈ ನಾಡಿನ ಜಾತ್ರೆಗೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯದ ಭಕ್ತರ ಸಂಖ್ಯೆ ಅಪಾರವಾಗಿತ್ತು. ನಿರ್ಗುಣ ಮಠದಲ್ಲಿ ಭಕ್ತರ ಶ್ಲೋಕ ಹಾಗೂ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ ಹಾಡು ಎಲ್ಲ ಭಕ್ತರು ಸೇರಿ ಹಾಡಿದರು. ಶ್ರೀ ದತ್ತ ಮಹಾರಾಜರೇ ಜೈ ಎಂದು ಜಯಘೋಶ ಹಾಕುತ್ತಾ ದರ್ಶನ ಪಡೆದು ಪುನೀತರಾದರು. ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ದತ್ತ ಮಹಾರಾಜ ದೇವಸ್ಥಾನದ ಅರ್ಚಕರು ಭಜನೆ ಮಾಡುತ್ತಾ ಜಯಘೋಷ ಹಾಕಿದರು.