ನಿರಾಶ್ರಿತರ ನಿವೇಶನಖಾಜಾಶ್ರೀ ಸ್ವಾಧೀನ
ಗುಲ್ಬರ್ಗ: ತಾಲೂಕಿನ ಶ್ರೀನಿವಾಸ ಸರಡಗಿ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ.195 ರಲ್ಲಿ ಬರುವ ಖಾಜ ಕೋಟನೂರ ಗ್ರಾಮದ ನಿರಾಶ್ರಿತ ಬಡವರಿಗೆ ಪುನಾವಸತಿ ಕೇಂದ್ರದ ಅಡಿಯಲ್ಲಿ ನೀಡಲ್ಪಟ್ಟ ನಿವೇಶನಗಳನ್ನು ಖಾಜಾ ಕೋಟನೂರು ಮಠದ ಶ್ರೀ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಬಹುಜನ ಜಾಗೃತಿ ವೇದಿಕೆ ಮತ್ತು ನಿವೇಶನ ಕಳೆದುಕೊಂಡ ಗ್ರಾಮಸ್ಥರು ತಹಸೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದರು. ಭೂಮಾಪನ ವಿಭಾಗದ ಅಧಿಕಾರಿಗಳು ಭೂಮಾಪನ ಅಳತೆ ಮಾಡಿ ಮಠದ ಸ್ವಾಮಿಗಳು ಸ್ವಾದೀನ ಪಡಿಸಿಕೊಂಡಿದ್ದಾರೆ ಎಂದು ವರದಿ ಸಲ್ಲಿಸಿದರೂ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರು ತೆರವುಗೊಳಿಸಲು ವಿನಾ ಕಾರಣ ತಡ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ಈ ಬಡವರ ನಿವೇಶನಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಬಹುಜನ ಜಾಗೃತಿ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ. ಒಂದು ವೇಳೆ ಈ ನಿವೇಶನಗಳನ್ನು ತೆರವುಗೊಳಿಸದಿದ್ದರೆ 20 ರಂದು ಖಾಜಾಕೋಟನೂರ ಗ್ರಾಮ ಮಠದ ಮುಂಭಾಗ ಮುಖ್ಯರಸ್ತೆಯಲ್ಲಿ ರಸ್ತಾರೋಕೋ ಚಳವಳಿ ಹಮ್ಮಿಕೊಳ್ಳಲು ಅನಿವಾರ್ಯವಾಗುತ್ತದೆ ಎಂದು ರವಿ ಆರ್.ಕೋರಿ ತಿಳಿಸಿದ್ದಾರೆ.