ನ್ಯಾಯ ಸಮಿತಿಗೆ ಮಾಳಗೆ ಆಯ್ಕೆ
ಚಿಂಚೋಳಿ: ತಾಲೂಕ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿಗೆ ನಡೆದ ಚುನಾವಣೆಯಲ್ಲಿ ಕೋಡ್ಲಿ ತಾಲೂಕ ಪಂಚಾಯ್ತಿ ಕ್ಷೇತ್ರದ ಗುಂಡಪ್ಪಾ ವೀರಣ್ಣ ಮಾಳಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ. ತಾಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಗೊಳಿಸಲು ಸಮಿತಿಯ ಸದಸ್ಯರಾದ ಶಾಮಸುಂದರ ಪವಾರ, ಉಷಾ ಕಾಬಾ, ಸುನೀತಾ ಪಡಶೆಟ್ಟಿ, ಶಶಿಕಲಾ ಪಾಟೀಲ್, ನರಸಿಂಹಲು ಕುಂಬಾರ ಮುಂತಾದವರು ಸಭೆಯಲ್ಲಿ ಚರ್ಚಿಸಿದ ನಂತರ ಶಾದೀಪೂರ ತಾಪಂ ಸದಸ್ಯರು ಹಾಗೂ ತಾಲೂಕ ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ ಅವರು ಗುಂಡಪ್ಪಾ ವೀರಣ್ಣ ಮಾಳಗೆ ಅವರ ಹೆಸರನ್ನು ಸಭೆಯಲ್ಲಿ ಸೂಚಿಸಿದರು. ಸಲಗರ ಬಸಂತಪುರ ತಾಪಂ ಕಾಂಗ್ರೆಸ್ ಪಕ್ಷದ ಸದಸ್ಯೆ ಶಶಿಕಲಾ ಪಾಟೀಲ್ ಅನುಮೋದಿಸಿದ ನಂತರ ಕೋಡ್ಲಿ ತಾಪಂ ಕ್ಷೇತ್ರದ ಸದಸ್ಯ ಗುಂಡಪ್ಪಾ ವೀರಣ್ಣ ಮಾಳಗೆ ಅವರನ್ನು ನ್ಯಾಯ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ್ದಾರೆಂದು ತಾಪಂ ಇಒ ಜಗದೇವ ಬೈಗೊಂಡ ಘೋಷಿಸಿದರು.