'ಪರಿಸರ ಸಂರಕ್ಷಣೆ ಅಗತ್ಯ'
ಜೇವರ್ಗಿ: ಪರಿಸರದ ಸಮತೋಲನ ಕಾಪಾಡಲು ಸಸಿಗಳನ್ನು ಹೆಚ್ಚು ನಡೆಸುವುದು ಅವಶ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕೆಂದು ಮಹಾತ್ಮಾ ಗಾಂಧಿ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ ಹೇಳಿದರು. ಇತ್ತೀಚೆಗೆ ಪಟ್ಟಣದ ದಾನಮ್ಮ ಪದವಿ- ಪೂರ್ವ ಕಾಲೇಜಿನಲ್ಲಿ ಇಕೋ- ಕ್ಲಬ್ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೇವರ್ಗಿ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ್, ಪಪಂ ಅಧ್ಯಕ್ಷೆ ಅನೀತಾ ಪಾರ್ಶಿ, ಮಡಿವಾಳಪ್ಪ ಮಡಿವಾಳಕರ್, ನಿಜಲಿಂಗಪ್ಪ ದೊಡ್ಮನಿ, ಧನ್ನರಾಜ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶ್ರೀಮಂತ ಹೊನ್ಮಾಳೆ ಉಪನ್ಯಾಸ ನೀಡಿದರು. ಇಕೋ- ಕ್ಲಬ್ನ ಅಧ್ಯಕ್ಷ ಜಗದೀಶ ಉಕನಾಳಕರ್ ಮಾತನಾಡಿದರು.