ಪವಾಡ ಮಾಡಿದ ಮಕ್ಕಳು
ಕೆಂಭಾವಿ: ಸಮೀಪದ ಯಾಳಗಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪವಾಡ ಮಾಡಿ ತೋರಿಸುವ ಮೂಲಕ ನೆರೆದಿದ್ದ ಜನರ ಮನ ಗೆದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್ಜೀ ಪೌಂಡೇಷನ್ ಸಹಯೋಗದಲ್ಲಿ ಬುಧವಾರ ಪೂರ್ವಪ್ರಾಥಮಿಕ 'ಮಕ್ಕಳ ಪವಾಡ ಮೇಳ'ದಲ್ಲಿ ಮಕ್ಕಳು ಪವಾಡ ಬಯಲು ಮಾಡಿ ತೋರಿಸಿದರು.
ಪುಟ್ಟ ಮಕ್ಕಳು ತಮ್ಮ ತೊದಲು ನುಡಿಗಳಲ್ಲಿ ಮೇಳ ನೋಡಲು ಬಂದ ಪಾಲಕರಿಗೆ ವಿವರಿಸಿದ ಮತ್ತು ಚಟುವಟಿಕೆ ಮಾಡಿ ತೋರಿಸಿದ್ದು ಜನಮನ ಸೆಳೆಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಂದೆನವಾಜ ಕೋಡೆಕಲ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯತಿಥಿಯಾಗಿ ಶಾಲೆಯ ಮುಖ್ಯಗುರು ಮಹ್ಮದ್ ರಫೀಕ್ ವಹಿಸಿದ್ದರು. ಅಬ್ದುಲ್, ಸುಲ್ತಾನಾ ಬೇಗಂ ಹೊಸ್ಮನಿ, ಕಾಸಿಮ ಸಾಬ, ಜಾಕಿರ್, ನೇಹಮತ್, ಮುಕ್ರುಮ್ ಸಾಬ್, ಜೈರುದ್ದಿನ್ ಭಾಗವಹಿಸಿದ್ದರು. ತಹಸೀನ ನಾಲತವಾಡ ಪ್ರಸ್ತಾವಿಕ ಮಾತನಾಡಿದರು. ಖಾದರ್ ಪಾಷಾ ಸ್ವಾಗತಿಸಿದರು. ಆರ್.ಎಂ. ಹುಳ್ಳಿ ನಿರೂಪಿಸಿ, ರೇಹಾನಾ ಬೇಗಂ ವಂದಿಸಿದರು.