ಬಲಭೀಮಸೇನ ಜಾತ್ರೆ
ಗುರುಮಠಕಲ್: ಹೈದ್ರಬಾದ್ ಕರ್ನಾಟಕ ಭಾಗದ ಭಕ್ತರ ಮನೆಯ ಅರಾಧ್ಯ ದೈವ ಮೋತಕ ಗಿಡದಲ್ಲಿ ಬಂದು ಭಕ್ತ ಜನರ ಇಷ್ಟರ್ಥಗಳನ್ನು ಪೂರೈಸುವ ಮೋತಕಪಲ್ಲಿಯ ಬಲಭೀಮಸೇನ ಸ್ವಾಮಿಯ ಜಾತ್ರಾ ಮಹೋತ್ಸವ ಹೊಸ್ತಿಲ ಹುಣ್ಣಿಮೆ ದಿನ ಪ್ರಾರಂಭಗೊಂಡು ಎರಡು ದಿನ ವೈಭವದಿಂದ ನಡೆಯಿತು.
ಹುಣ್ಣಿಮೆಯ ದಿನ ಬೆಳ್ಳಿಗೆ 5.30 ನಿಮಿಷಕ್ಕೆ ನೈರ್ಮಲ್ಯ ಅಭಿಷೇಮ ಮತ್ತ ವ್ಯಾಸ ಪೂಜೆಗಳು ನಡೆದು ಸಂಜೆ 4 ರಿಂದ 11 ಗಂಟೆವರೆಗೆ ರಥದಲ್ಲಿ ಆರತಿ ಹಾಗೂ ರಾತ್ರಿ 11.45ಕ್ಕೆ ರಥೋತ್ಸವ ಕಾರ್ಯಕ್ರಮಗಳು ಜರುಗಿದವು. ಹುಣ್ಣಿಮೆಯ ಮರುದಿನ ಬುಧವಾರ ಸಾಯಂಕಾಲದ ಸಂದರ್ಭದಲ್ಲಿ ಸ್ವಾಮಿಯ ಹೂವಿನ ರಥೋತ್ಸವ ಹಾಗೂ ರಾತ್ರಿ ಪುಷ್ಕರಣಿಯಲ್ಲಿ ಅವಬ್ರತ ಸ್ನಾನ ನಡೆದವು.
ಈ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದ್ದಂತೆ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾದರು. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ಸೇಡಂ, ಗುಲ್ಬರ್ಗ, ತಾಂಡೂರ, ಕೊಡಂಗಲ್, ನಾರಾಯಣ ಪೇಟ, ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್ ಸೇರಿದಂತೆ ವಿವಿಧ ಘಟಕಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.