ಮಕ್ಕಳ ಪ್ರತಿಭೆಗೆ ಶಿಕ್ಷಕರು ಪೋತ್ಸಾಹಿಸಲಿ: ಬೆಣ್ಣೂರಕರ್
ಚಿತ್ತಾಪುರ: ಮಕ್ಕಳಲ್ಲಿ ಹುದಗಿದ ಪ್ರತಿಭೆ ಗುರುತಿಸಿ ಶಿಕ್ಷಕರು ಪೋತ್ಸಾಹಿಸಬೇಕೆಂದು ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ಹೇಳಿದರು. ಚಿತ್ತಾಪುರದ ಸರ್ಕಾರಿ ಕನ್ಯಾ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಪೂರ್ವ ವಲಯ ಹಮ್ಮಿಕೊಂಡ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಆಸಕ್ತಿ ವಹಿಸಿ ಅವರಲ್ಲಿ ಪ್ರತಿಭೆ ಗುರುತಿಸಿದರೆ ಅವರು ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ಬಿಆರ್‌ಪಿ ಅಬ್ದುಲ್ ಸಲಿಂ, ಸರ್ಕಾರಿ ನೌಕರರ ಸಂಘದ ಸದಸ್ಯ ನಾಗೇಂದ್ರ ಕಾಶಿ, ಮುಖ್ಯಗುರು ರೇವಣಸಿದ್ದಪ್ಪ, ಬಾಬು ಕರದಾಳ, ಸಿಆರ್‌ಸಿ ವಿಜಯಶೇಖರ ಶಿಕ್ಷಕ ರಮೇಶ, ನಾಗಣ್ಣ, ಉದಯಕುಮಾರ್ ಭಾಗವಹಿಸಿದ್ದರು. ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಯ ಮುಖ್ಯಗುರು ಜಾನಬಾಯಿ ಅಧ್ಯಕ್ಷತೆ ವಹಿಸಿದ್ದರು. ವೀರಸಂಗಪ್ಪ ಸುಲೆಗಾಂವ ಕಾರ್ಯಕ್ರಮ ನಿರೂಪಿಸಿದರು.