ಮಕ್ಕಳ ಭವಿಷ್ಯ ಟಿವಿ, ಮೊಬೈಲ್ಗೆ ಬಲಿ: ಜೋಶಿ
ಸೇಡಂ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಿಗೆ ಟಿವಿ ಮತ್ತು ಮೊಬೈಲ್ ಕೊಟ್ಟು ಹಾಳುಗೆಡವದಿರಿ ಎಂದು ಆರೋಗ್ಯ ಇಲಾಖೆಯ ವಿನಾಯಕ ಜೋಶಿ ಪಾಲಕರಿಗೆ ಕಿವಿ ಮಾತು ಹೇಳಿದರು. ಪಟ್ಟಣದ ವಿಶ್ವಧಾಮ ಶಾಲೆಯಲ್ಲಿ ವಿಶ್ವಧಾಮ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಮಕ್ಕಳ ಪ್ರಗತಿಗೆ ಪೂರಕ ಆರೋಗ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಮಕ್ಕಳಿಗೆ ಶಿಕ್ಷಕರು ಮತ್ತು ಪಾಲಕರು ಜಂಟಿಯಾಗಿ ಒಳ್ಳೆಯ ಸಂಸ್ಕಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆಧುನೀಕರಣದಿಂದ ಮಕ್ಕಳ ಅಭ್ಯಾಸ ಹಾಳಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಟ್ರಸ್ಟ್ನ ಸಿದ್ಧರಾಮ ಮಾತನಾಡಿದರು. ಮಂಜುಳಾ ಎಂ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಗುರು ಸುರೇಶ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ರಾಣಿ ರಾಠೋಡ ನಿರೂಪಿಸಿದರು. ಮಹಾದೇವ ಜೈನ್ ಸ್ವಾಗತಿಸಿದರು. ಇಂದು ವಂದಿಸಿದರು.