ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾತೃಭಾಷೆಗೆ ಒತ್ತು ನೀಡಿ: ಶ್ರೀಗಳು

Mainashree
Updated On : 20 Dec 2013, 11:09 am

ಗುರುಮಠಕಲ್: ಅನ್ಯಭಾಷೆಗಳನ್ನು ವ್ಯವಹಾರಗಾಗಿ ಮಿತಿಯಲ್ಲಿಟ್ಟು ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸಲು ಖಾಸಾಮಠದ ಮುರುಘರಾಜೇಂದ್ರ ಶ್ರೀ ಕರೆ ನೀಡಿದರು. ಚಪೇಟ್ಲಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಗಡಿನಾಡಲ್ಲಿ ಕನ್ನಡದ ಕಂಪು ಸರಣಿ ಮಾಸಿಕದ 5ನೇ ಉಪನ್ಯಾಸಕ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಭಾಗ ಗಡಿನಾಡಲ್ಲಿರುವುದರಿಂದ ನೆರೆಹೊರೆಯ ಭಾಷೆ ಬಲ್ಲವರಾಗುವುದರಿಂದ ತಪ್ಪಿಲ್ಲ, ಆದರೆ ಮಾತೃ ಭಾಷೆಯನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ತಮ್ಮ ನಾಲಿಗೆಯಲ್ಲಿ ಕನ್ನಡ ಪದಗಳೇ ಗುನುಗುತ್ತಿರಲಿ ಎಂದು ಸಲಹೆ ನೀಡಿದರು. ಚುಸಾಪ ಅಧ್ಯಕ್ಷ ಎಂ.ಬಿ. ನಾಯಕಿನ್ ಮೂಢನಂಬಿಕೆಗಳು ಹಾಗೂ ಅದರ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ಶಾಲೆಯ ಮುಖ್ಯಗುರು ಹಣಮಂತು.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಡಾ. ಭೀಮಶಂಕರ ಮುತ್ತಿಗಿ, ಎಸ್‌ಡಿಎಂಸಿ ಅಧ್ಯಕ್ಷ ಭೀಮುಲು ಇದ್ದರು. ಸಿದ್ದಯ್ಯ ಮಠಪತಿ ನಿರೂಪಿಸಿದರು. ಕಿಷ್ಟರೆಡ್ಡಿ ಸ್ವಾಗತಿಸಿದರು. ಸುನೀಲ ಶುಕ್ಲಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement