ಶಾಲೆಗೆ ಊಟದ ತಟ್ಟೆ ದೇಣಿಗೆ
ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಚಿಂಚೋಳಿಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 100 ಊಟದ ತಟ್ಟೆಗಳನ್ನು ಉಪನ್ಯಾಸಕ ಹಾಗೂ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ್ ದೇಣಿಗೆಯಾಗಿ ನೀಡಿದರು.
ತಟ್ಟೆಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಾಟೀಕಾರ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ ಎಂದರು. ಸಮಾರಂಭದಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅರ್ಜುನ್ ದೊಡ್ಡಮನಿ ಮಾತನಾಡಿ, ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ್ ಅವರ ಸೇವಾಮನೋಭಾವವನ್ನು ಶ್ಲಾಘಿಸಿದರು.
ಬಿಆರ್ಸಿ ಸಮನ್ವಯ ಅಧಿಕಾರಿ ವೀರಣ್ಣ ಬೊಮ್ಮನಳ್ಳಿ, ಜಯಪ್ಪ ಚಾಪಲ್, ಡಾ. ಶಿವರಾಜ್ ಕುಲಕರ್ಣಿ, ಸಂಜು ಪಾಟೀಲ್, ವೀರಣ್ಣ ಸುಗಂಧಿ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥ ತುಳಸಿರಾಮ ಬೇಂದ್ರೆ ಅಧ್ಯಕ್ಷತೆ ವಹಿಸಿ ದೇಣಿಗೆ ನೀಡಿದ ಊಟದ ತಟ್ಟೆಗಳನ್ನು ಸ್ವೀಕರಿಸಿದರು. ಸಹ ಶಿಕ್ಷಕ ದೇವಿದಾಸ ರಾಠೋಡ ಸ್ವಾಗತಿಸಿದರು. ಸಹ ಶಿಕ್ಷಕ ಬಸವರಾಜ್ ಐನೋಳ್ಳಿ ನಿರೂಪಿಸಿದರು. ಸಿಬ್ಬಂದಿ ಮಲ್ಲಿನಾಥ ವಂದಿಸಿದರು.