ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಹಾಯಧನ ಹೆಚ್ಚಳಕ್ಕೆ ಒತ್ತಾಯ

Mainashree
Updated On : 20 Dec 2013, 11:08 am

ಆಳಂದ: ಬಡವರಿಗೆ ಸರ್ಕಾರ ನೀಡುವ ಶವ ಸಂಸ್ಕಾರದ ಸಾವಿರ ರು. ಸದ್ಯದ ಪರಿಸ್ಥಿತಿಯಲ್ಲಿ ಸಾಲದು, ಕನಿಷ್ಠ 5000 ನೀಡಬೇಕೆಂದು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಸಲ್ಲಿಸಿರುವ ಬ್ಲಾಕ್ ಅಧ್ಯಕ್ಷ ಮಹ್ಮದ್ ಮಕ್ದುಮ್ ಅನ್ಸಾರಿ ಮತ್ತು ಪ್ರಧಾನ ಕಾರ್ಯದರ್ಶಿ ತಾನಾಜಿ ಟಿ. ಸೂರ್ಯವಂಶಿ ಅವರು, ಅನೇಕ ಬಡವರು ಅಗ್ನಿ ಸ್ಪರ್ಶದಿಂದ ಅಂತ್ಯಸಂಸ್ಕಾರ ಮಾಡುತ್ತಾರೆ. ಕಟ್ಟಿಗೆ ಬೆಲೆ ಹೆಚ್ಚಳವಾಗಿದೆ. ಇನ್ನೂ ಕೆಲವರು ಸಮಾದಿ ಸ್ಥಳ ಅಗೆಯಲು ಬೇಕಾಗುವ ಇಬ್ಬರು ಕಾರ್ಮಿಕರಿಗೆ ಕನಿಷ್ಠ ಸಾವಿರ ರು. ಕೂಲಿ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಪ್ರಮಾಣ ಪತ್ರವನ್ನು ಮೂರು ದಿನಗಳಲ್ಲೆ ಸಲ್ಲಿಸಲು ಅಧಿಕಾರಿಗಳು ಹೇಳುತ್ತಾರೆ. ಕನಿಷ್ಠ ಒಂದು ತಿಂಗಳ ಅವಧಿಯಾದರು ದೊರೆಯುವಂತಾಗಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement