'ಎಸ್ಡಿಎಎಂಸಿ ಮನೆಯ ಯಜಮಾನ'
ಹುಣಸಗಿ: ಶಾಲೆಗಳ ಎಸ್ಡಿಎಮ್ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಮನೆಯ ಯಜಮಾನನಿದ್ದಂತೆ. ಸಂಪೂರ್ಣ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಾಗಬೇಕಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಡಿಯಣ್ಣ ಬೆಳ್ಳುಬ್ಬಿ ಹೇಳಿದರು. ಸಮೀಪದ ಬಲಶೆಟ್ಟಿಹಾಳನಲ್ಲಿ ನಡೆದ 2 ದಿನಗಳ ಎಸ್ಡಿಎಮ್ಸಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಮಾದರಿಯ ಶಾಲೆಗಳನ್ನಾಗಿ ರೂಪಿಸುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಡಿಎಮ್ಸಿ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಮಾಡಿದರು. ಹಿರಿಯರಾದ ಮನೋಹರರಾವ್ ದ್ಯಾಮನಹಾಳ್, ಶಿವಶರಣಪ್ಪ ಗಂಗನಹಳ್ಳಿ, ಭೀಮಣ್ಣ ಕಲ್ಯಾಣಿ, ಸಿಆರ್ಪಿ ಸುಖದೇವ್ ಪಾಟೀಲ್ ಸೇರಿದಂತೆ ಇತರರು ಇದ್ದರು. ನಿಂಗನಗೌಡ ಪಾಟೀಲ್ ನಿರೂಪಿಸಿದರು. ಶ್ರೀಧರ ವಿ.ಆರ್. ವಂದಿಸಿದರು.
--