ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಂಪನಿ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 21 Dec 2013, 11:49 am

ಗುಲ್ಬರ್ಗ: ಸೇಡಂ ತಾಲೂಕಿನ ಮಳಖೇಡದಲ್ಲಿರುವ ಸೌತ್ ಇಂಡಿಯಾ ಸಿಮೆಂಟ್ ಕಂಪನಿ ಪುನರ್ ಆರಂಭಿಸಬೇಕೆಂದು ಸಂಕಷ್ಟದಲ್ಲಿರುವ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಾರಂಭದ ಹಂತದಲ್ಲಿಯೇ ಗಣಿ ಪರವಾನಗಿ ನವೀಕರಿಸಬೇಕೆಂದು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತು. ಇದರಿಂದಾಗಿ ಕಳೆದ 6 ತಿಂಗಳಿಂದ ಕಾರ್ಖಾನೆಯ ಸಿಮೆಂಟ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು.
ಈ ಕಂಪನಿಯಲ್ಲಿ 150ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಾರ್ಖಾನೆ ಉತ್ಪಾದನೆ ಸ್ಥಗಿತವಾದ ಕಾರಣ ನಾವೆಲ್ಲ ಸಂಕಷ್ಟದಲ್ಲಿದ್ದೇವೆ. ಗಣಿ ಪರವಾನಗಿ ಇಲ್ಲದೆ ಈ ಘಟಕ ಮುಚ್ಚುವ ಪರಿಸ್ಥಿತಿ ಒದಗಿ ಬಂದಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ಬಿಐಎಫ್ಆರ್ ಅನುಮೋದನೆಯ ಪ್ರಕಾರ ನಮ್ಮ ಕಂಪನಿಯ ಆಡಳಿತ ವರ್ಗಕ್ಕೆ ತಾತ್ಕಾಲಿಕ ಷರತ್ತು ಬದ್ಧ ಗಣಿಗಾರಿಕೆ ಪರವಾನಗಿಯನ್ನು ನೀಡಿ ಸಿಮೆಂಟ್ ಉತ್ಪಾದನೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವಾನಂದ ಸಾಲಿಮಠ, ದೇವಿಂದ್ರಪ್ಪ, ಅಬ್ದುಲ್ ಸತ್ತಾರ್, ಲಿಂಗಾರೆಡ್ಡಿ, ಸರದಾರ ಮಿಯಾ, ಇಕ್ಬಾಲ್, ಅರ್ಜುನಸಂಗಾವಿ, ಭೀಮರಾವ, ಭೀಮರಾಯ, ಬಸವರಾಜ ಇತರರು ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement