ಕಾರಾಗೃಹ ಶಿಕ್ಷೆ
ಗುಲ್ಬರ್ಗ: ಸರ್ಕಾರಿ ಬಸ್ಸಿಗೆ ಓವರ್ ಟೇಕ್ ಮಾಡಿ ಡಿಕ್ಕಿಹೊಡೆದು ಸೈಡ್ಗ್ಲಾಸ್ ಒಡೆದು ನಷ್ಟ ಮಾಡಿದ್ದರಿಂದ ಇಬ್ಬರು ಆರೋಪಿತರಿಗೆ 5ನೇ ಅಪರ್ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಮೂರ್ತಿ ತಯ್ಯಬಾ ಸುಲ್ತಾನಾ ಅವರು ಕಲಂ 323, 353, 427, 504, 506, ಸ.ವಾ. 24, ಭಾ.ದಂ.ಸಂ. ಅಡಿ ಆರೋಪಿಗಳಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2500 ದಂಡ ವಿಧಿಸಿ ಈಚೆಗೆ ಆದೇಶ ನೀಡಿದ್ದಾರೆ. ಜೇವರ್ಗಿ ಕ್ರಾಸ್ನ ಎಂ.ಆರ್. ಟ್ರಾವೆಲ್ಸ್ ಕಚೇರಿ ಎದುರುಗಡೆ 31. 3. 2010 ರಂದು ಬೆಳಗ್ಗೆ 11ಕ್ಕೆ ಆರೋಪಿತರು ಕೆಎಸ್ಆರ್ಟಿಸಿ ಬಸ್ಗೆ ಓವರ್ ಟೇಕ್ ಮಾಡುವುದರ ಮೂಲಕ ಬಸ್ಸಿನ ಬಲಗಡೆಗೆ ಡಿಕ್ಕಿ ಹೊಡೆದು ಸೈಡ್ ಗ್ಲಾಸ್ ಒಡೆದಿದ್ದಲ್ಲದೇ ಬಸ್ ಚಾಲಕ ಕಂ ನಿರ್ವಾಹಕ ಅಡಿವೆಪ್ಪ ತಂದೆ ಬಸವರಾಜ ಚಲವಾದಿ ಅವರನ್ನು ಬೈದು ಕರ್ತವ್ಯಕ್ಕೆ ಅಡೆತಡೆ ಉಂಟು ಮಾಡಿ ಮುಖದ ಮೇಲೆ ಹೊಡೆದು ಗಾಯಗೊಳಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆರೋಪಿತರಾದ ರಾಜಕುಮಾರ್ ತಂದೆ ರುದ್ರಯ್ಯ ಸ್ವಾಮಿ ಸಾಕಿನ ವಾದ್ಗರಗಿ ಹಾಗೂ ಪರುಶುರಾಮ ತಂದೆ ಫಕೀರಪ್ಪ ಹಳಿಮನಿ ಸಾಕಿನ ರಂಗಂಪೇಠ ಇವರುಗಳಿಗೆ ಮೇಲಿನಂತೆ ತೀರ್ಪು ನೀಡಿ ಶಿಕ್ಷೆ ವಿಧಿಸಲಾಗಿದೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶರಣಗೌಡ ಅವರು ವಾದ ಮಂಡಿಸಿದ್ದರು.
ಪಿಂಚಣಿಗೆ ಆಗ್ರಹ
ಗುಲ್ಬರ್ಗ: ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಅರ್ಜಿ ಹಾಕಿದ ಬಡವರಿಗೆ ವಿಧವಾ, ಅಂಗವಿಕಲ, ವೃದ್ಧಾಪ್ಯ ಮಾಸಿಕ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘ ಜೇವರ್ಗಿ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿತು.ಅರ್ಜಿ ಹಾಕುವ ಬಡವರಿಗೆ ಆದಾಯ ಮತ್ತು ಜಾತಿ ಪ್ರಮಾಣ ಪಡೆಯಬೇಕೆಂಬ ಮತ್ತು ಮಕ್ಕಳು ಇರಬಾರದು ಎನ್ನುವ ಷರತ್ತು ಕೂಡಲೇ ವಾಪಸ್ ಪಡೆಯಬೇಕು, ಹೊಸ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಬಡವರಿಗೆ ಬಿಪಿಎಲ್ ರೇಷನ್ ಕಾರ್ಡ್ ಮಂಜೂರು ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ವಿವಿಧ ಗ್ರಾಮಗಳ ಕೃಷಿ ಕಾರ್ಮಿಕರಿಗೆ ಬಾಕಿ ವೇತನ ನೀಡಬೇಕು, ಚುನಾವಣೆ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ ಮಾಡಿಕೊಳ್ಳಲು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸುಭಾಷ ಹೊಸಮನಿ, ವೆಂಕೋಬರಾವ ವಾಗಣಗೇರಿ, ಸಿದ್ದರಾಮ ಹರವಾಳ, ಬಸಯ್ಯ ಹಿರೇಮಠ, ಮಲ್ಕಪ್ಪ ಮ್ಯಾಗೇರಿ, ಸಕ್ರೆಪ್ಪ ಗೌಡಗರಿ, ಮಲ್ಲಿಕಾರ್ಜುನ ಅಂದಾ, ಶಿವರಾಜ ದೇಸಾಯಿ, ಚನ್ನಬಸಪ್ಪ ಸೊಪ್ಪಣ್ಣ ಸೇರಿದಂತೆ ಹಲವಾರು ಕೃಷಿ ಕಾರ್ಮಿಕರು ಭಾಗವಹಿಸಿದ್ದರು.
ಪೂರ್ವಸಿದ್ಧತಾ ಸಭೆ
ಗುಲ್ಬರ್ಗ: 2013-14ನೇ ಸಾಲಿನ ಗುಲ್ಬರ್ಗ ವಿಭಾಗದ ಚಿತ್ರಕಲಾ ಶಿಕ್ಷಕರ 2ನೇ ಶೈಕ್ಷಣಿಕ ಮಹಾ ಸಮ್ಮೇಳ ಬಳ್ಳಾರಿಯಲ್ಲಿ ನಡೆಯಲಿದ್ದು, ಪೂರ್ವ ಸಿದ್ಧತೆಗಾಗಿ 22ರ ಬೆಳಗ್ಗೆ 11ಕ್ಕೆ ಗುಲ್ಬರ್ಗ ನಗರದ ದಿ. ಐಡಿಯಲ್ ಫೈನ್ ಆರ್ಟ್ ಸಂಸ್ಥೆ ಪಬ್ಲಿಕ್ ಗಾರ್ಡನ್ನಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಭೆ ಕರೆಯಲಾಗಿದೆ.
ಇಂದು ಬಂದ್ಗೆ ಕರೆ
ಗುಲ್ಬರ್ಗ: ಖಾಸಗಿ ವೃತ್ತಿ ಕಾಲೇಜುಗಳಲ್ಲಿ ಸರ್ಕಾರಿ ಮೆರಿಟ್ ಕೋಟಾ ನಿಷೇಧದ ವಿರುದ್ಧ ಎಐಡಿಎಸ್ಒ ರಾಜ್ಯಾದ್ಯಂತ ಡಿ.21ರಂದು ಪಿಯು ಕಾಲೇಜುಗಳ ಬಂದ್ಗೆ ಕರೆ ನೀಡಿದೆ ಎಂದು ಎಐಡಿಎಸ್ಒ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ವೃತ್ತಿ ಕಾಲೇಜುಗಳಲ್ಲಿ ಸಿಇಟಿ ಇರುವುದಿಲ್ಲ. ಮೆರಿಟ್ ಕೋಟಾ ರದ್ದಾಗಲಿದೆ. ರಾಜ್ಯ ಸರ್ಕಾರ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯಿದೆ 2006ರ ಜಾರಿ ಸರ್ಕಾರದ ತೀರ್ಮಾನದ ವಿರುದ್ಧ ರಾಜ್ಯಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿಯಲಿದ್ದಾರೆ.
ಗೋಶಾಲೆ ಆರಂಭ
ಗುಲ್ಬರ್ಗ: ಇಲ್ಲಿನ ಬ್ರಹ್ಮಪುರ ರಾಯರ ಮಠದ ಹಿಂಭಾಗದಲ್ಲಿ ಧೀಮಹಿ ಟ್ರಸ್ಟ್ ಆಸರೆಯ ಗೋಶಾಲೆ ಡಿ.21ರಂದು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರು ಚಾಲನೆ ನೀಡಲಿದ್ದಾರೆ. ಬೆ.8.30ಕ್ಕೆ ಲಕ್ಷ್ಮೀ ನರಸಿಂಹ ಮಂದಿರದಿಂದ ಗೋವುಗಳ ಮೆರವಣಿಗೆ ನಡೆಯಲಿದೆ. ಗೋಶಾಲೆ ಉದ್ಘಾಟನೆ ಹಾಗೂ ಸಭೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆ. 9.30ಕ್ಕೆ ಸಂಪನ್ನವಾಗಲಿದೆ. ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ್ಷ ಗುರುರಾಜ ಚಿತ್ತಾಪುರಕರ್, ಯು.ಭೀಮರಾವ್ ಕೋಲಾರ್, ಮಾರ್ಥಾಂಡ ಶಾಸ್ತ್ರೀ ಭಾಗವಹಿಸುತ್ತಿದ್ದಾರೆ.