ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರ್ಯಕರ್ತರಿಗೆ ಕ್ಷೇತ್ರ ಕಾರ್ಯವೇ ಅಡಿಗಲ್ಲು

Lingaraj Badiger
Updated On : 21 Dec 2013, 11:49 am

ಗುಲ್ಬರ್ಗ: ಕ್ಷೇತ್ರ ಕಾರ್ಯಕರ್ತರು ಉತ್ತಮ ಸಮಾಜ ಕಾರ್ಯಕರ್ತರಾಗಬೇಕಾದರೆ ಕ್ಷೇತ್ರ ಕಾರ್ಯವೇ ಅಡಿಗಲ್ಲು ಎಂದು ರಾಷ್ಟ್ರಪ್ರಶಸ್ತಿ ವಿಜೇತರಾದ ಶಿಕ್ಷಕಿ ಪ್ರಮೀಳಾಬಾಯಿ ದಿಗ್ಗಾವಿ ಅಭಿಪ್ರಾಯಪಟ್ಟರು.
  ನಗರದ ಶ್ರೀಸಾಯಿ ಪ್ರಸಾದ ಎಂಎಸ್ಡಬ್ಲೂ ಕಾಲೇಜಿನಲ್ಲಿ ಕ್ಷೇತ್ರ ಕಾರ್ಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಕ್ಷರ ಭಾರತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಕ್ಷರ ಭಾರತ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಭಾರತಿ ಹಿರೇಮಠ ಮಾತನಾಡಿ, ಅಕ್ಷರ ಅರಿವು ಅಭಿವೃದ್ಧಿ ಇವು ಸಾಕ್ಷರ ಭಾರತ ಕಾರ್ಯಕ್ರಮದ ಆಯಾಮ ಸರ್ವಾಂಗೀಣ ಅಭಿವೃದ್ಧಿಯ ಮೂಲವೇ ಸಾಕ್ಷರತೆ ಎಂದರು.ಗುಲ್ಬರ್ಗ ವಿಶ್ವವಿದ್ಯಾಲಯ ಡಾ. ಕೆ.ಎಸ್. ಮಾಲಿಪಾಟೀಲ್, ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀಕಾಂತ ಪಾಟೀಲ್ ರೇವೂರ, ಸುನೀಲಕುಮಾರ್ ಒಂಟಿ, ರಮೇಶ ಹಣಕುಣಿ, ಸುಭಾಷ ಜಾಧವ, ಯಲ್ಲಪ್ಪ ನಾಯ್ಕೋಡಿ, ಮಹಾದೇವ ಕೋರಬಾ, ಆನಂದ, ಭಾಗ್ಯದೇವಿ, ರಾಮೇಶ್ವರಿ, ದೇವಿಂದ್ರಪ್ಪ, ಪ್ರವೀಣ, ರಮೇಶ, ಶಿವಕುಮಾರ್, ಸುನೀತಾ, ಸುಭಾಷ ಬಿರಾದಾರ, ಸುನೀಲಕುಮಾರ್ ಪಾಟೀಲ್, ಮಾಲಾಶ್ರೀ,  ಎಸ್ಎಚ್ಜಿ ಮಹಿಳೆಯರು ಇತರರು ಉಪಸ್ಥಿತರಿದ್ದರು.
--
ಚಿತ್ತಾಪುರದಲ್ಲಿಂದು 121 ರೈತರಿಗೆ ಸತ್ಕಾರ
ಗುಲ್ಬರ್ಗ: ಜಿಲ್ಲೆಯ ಚಿತ್ತಾಪುರದಲ್ಲಿ ಡಿ.21ರಂದು ವಿಶಿಷ್ಟ ಸಮಾರಂಭ. ಸದಾಕಾಲ ತನ್ನ ಕಾಯಕದಲ್ಲೇ ನಿರತರಾಗಿರುವ 121 ಆಯ್ದ ಅನ್ನದಾತರಿಗೆ ಸತ್ಕರಿಸಲಾಗುವುದು.
  ವಿಶ್ವಗಂಗಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕ್ರಿಯಾಶೀಲ ಅಧ್ಯಕ್ಷ ಶಂಕರ ಬಿರಾದಾರ್ ಹಾಗೂ ಗೆಳೆಯರು ಈ ವಿನೂತನ ಸಮಾರಂಭ ಆಯೋಜಿಸಲಾಗಿದೆ. ಕಳೆದ 15 ವರ್ಷಗಳ ಹಿಂದೆಯೇ ಇದೇ ರೀತಿ ಸಮಾರಂಭ ಮಾಡಿ ಜನಮನ ಸೆಳೆದಿದ್ದ ಇವರು ಈ ಬಾರಿ ಮರಗೋಳದ ಗ್ರಾಮಸ್ಥರ ಸಹಕಾರದಿಂದ ಮತ್ತೆ ನೇಗಿಲಯೋಗಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹೆಣೆದಿದ್ದಾರೆ. ಮಾಹಿತಿ ನೀಡಿದ ಸಂಕರ ಬಿರಾದಾರ್ ಸಮಾಜದಲ್ಲಿ ಕಾಯಕ ನಿಷ್ಠೆಗೆ ಇನ್ನೊಂದು ಹೆಸರೇ ರೈತರು. ಆದರೆ ಇವರು ಈ ಪರಿ ಕೆಲಸ ಮಾಡುತ್ತಿದ್ದರೂ ಯಾರೂ ಸತ್ಕರಿಸುತ್ತಿಲ್ಲ. ಇದರಿಂದಾಗಿ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾಗಿ ಹೇಳಿದರು.
ಸರ್ಕಾರದ ನಿಷ್ಕಾಳಜಿಯೇ ಕಾರಣ: ಎಕರೆಗೆ 47 ಟೀಲ ಶೇಂಗಾ ಬೆಳೆದ ರೈತನಿಗೆ ಪುರಸ್ಕಾರ ಕೊಡಿ ಎಂದು ಕೃಷಿ ಇಲಾಖೆಗೆ ಮನವಿ ಮಾಡಿದರೂ ಯಾವ ಸ್ಪಂದನೆ ಬರಲಿಲ್ಲ. ಇಂತಹ ನೀರಸ ವಾತಾವರಣವೇ ಪುರಸ್ಕಾರ ನಿಗದಿ ಪಡಿಸಲು ಕಾರಣ ಎಂದು ಶಂಕರ ಬಿರಾದಾರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement