ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಮಗೂ ಆಂಧ್ರ ಮಾದರಿ ಮಾನ್ಯತೆ ಕೊಡಿ

Lingaraj Badiger
Updated On : 21 Dec 2013, 11:49 am

ಗುಲ್ಬರ್ಗ: ಗ್ರಾಮೀಣ ಪ್ರಥಮ ಚಿಕಿತ್ಸಕರಿಗೆ ಆಂಧ್ರ ಮಾದರಿ ಮಾನ್ಯತೆ ನೀಡಬೇಕು, ಆಯುಷ್ ವೈದ್ಯಾಧಿಕಾರಿಗಳಿಂದ ಕಿರುಕುಳ ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಪ್ರಥಮ ಚಿಕಿತ್ಸಾ ವೈದ್ಯರ ಸಂಘ ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ಮನವಿ ಮಾಡಿದರು.
ಸುಮಾರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಕರ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ, ಆಯುಷ್ ಇಲಾಖಾಧಿಕಾರಿಗಳು ಯಾವುದೇ ವೈದ್ಯಕೀಯ ನೋಂದಣಿ ಇರುವುದಿಲ್ಲ ಎಂದು ಕಿರುಕುಳ ಕೊಡುವುದಲ್ಲದೆ ಕ್ರಿಮಿನಲ್ ಮೊಕದ್ದಮೆ ಕೂಡ ಹೂಡುತ್ತಿದ್ದಾರೆ ಎಂದು ತಮ್ಮ ಗೋಳು ತೋಡಿಕೊಂಡರು.
 ರಾಜ್ಯದಲ್ಲಿ 30 ಸಾವಿರ ಪ್ರಥಮ ಚಿಕಿತ್ಸಕರ ಕುಟುಂಬಗಳು ಬೀದಿ ಪಾಲಾಗುವ ಸಂಭವವಿದ್ದು, ಕೂಡಲೇ ಸರ್ಕಾರ ಆಂಧ್ರ ಮಾದರಿಯ ಯೋಜನೆಯಂತೆ ಅಥವಾ ಕರ್ನಾಟಕ ಸರ್ಕಾರದ ಯೋಜನೆಯಂತೆ ನಮಗೂ ಉತ್ತಮ ತರಬೇತಿ ನೀಡಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಪಿ.ಕೆ. ಕುಮಾರ ರಾಠೋಡ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement