ಸುದ್ದಿ ಸಂಕ್ಷೇಪ
ಜಾನಪದ ಜಾತ್ರೆ ಇಂದು
ಗುರುಮಠಕಲ್: ಅನಿಕೇತನ ಟ್ರಸ್ಟ್ ಯಾದಗಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಖಾಸ ಮಠದಲ್ಲಿ ಡಿ. 22ರಂದು ಬೆಳ್ಳಿಗೆ 10 ಗಂಟೆಗೆ ಜಾನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಲ್ಲೇಶ ಎಸ್.ಕುರಕುಂದಿ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವೆಂಕಟರೆಡ್ಡಿ ಮುದ್ನಳ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜಗದೀಶ್ವರಿ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಯಾದಗಿರಿ, ಪತ್ರಕರ್ತ ಶರಣು ಗೋಗಿ, ವಿಶ್ವನಾಥ ರೆಡ್ಡಿ ದರ್ಶನಾಪುರ, ಮುಖ್ಯಧಿಕಾರಿ ರವೀಂದ್ರ ವೈ. ಲಂಬು, ಪಿ.ಕೆ. ಚೌದ್ರಿ ಭಾಗವಹಿಸಲಿದ್ದಾರೆ. ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ.
ಹರಿಜನವಾಡ ಸಮಸ್ಯೆಗಳ ಆಗರ
ಯಾದಗಿರಿ: ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಹರಿಜನವಾಡದಲ್ಲಿ 4 ವರ್ಷದ ಹಿಂದೆ ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಡಿ ಗ್ರಾಮದ ಹರಿಜನವಾಡಕ್ಕೆ ಒಂದು ಟಿಸಿಯನ್ನು ತಂದು ಲೈನ್ ಸಂಪರ್ಕ ಕಲ್ಪಿಸಿರುತ್ತಾರೆ. ಟಿಸಿ ಓಡಾಡುವ ಸ್ಥಳದಲ್ಲಿ ಅಳವಡಿಸಿದ್ದಾರೆ. ಇಲ್ಲಿ ಬೇಲಿ ತಂತಿ ಹಾಕುವುದು ಅವಶ್ಯವಿದೆ. ಸಂಬಂಧಪಟ್ಟವರು ಸ್ಪಂದಿಸಲು ಗ್ರಾಮಸ್ಥ ಚಿದಾನಂದ ಕಿಲ್ಲನಕೇರಾ ಆಗ್ರಹಿಸಿದ್ದಾರೆ.
ಹುಣಸಗಿ ಗ್ರಾಪಂ.ನಲ್ಲಿ ಮಾಸಿಕ ಸಭೆ
ಹುಣಸಗಿ: ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಮಾಸಿಕ ಸಭೆ ನಡೆಯಿತು. ಗ್ರಂಥಾಲಯ ಸ್ಥಳಾಂತರ, ಸಿಸಿ ರಸ್ತೆ, ಟಿಸಿ ಸ್ಥಳಾಂತರ, ಶೌಚಾಲಯ ಸಮಸ್ಯೆ, ವಿದ್ಯುತ್ ಸಮಸ್ಯೆ, ಸ್ಥಳಿಯ ಸರ್ಕಾರಿ ಶಾಲೆಗಳ ವ್ಯವಸ್ಥೆ ಮತ್ತು ಎಂಜಿಎನ್ಆರ್ಇಜಿಎ ಯೋಜನೆಯ ಕಾಮಗಾರಿಗಳ ಪ್ರಗತಿ ಕುರಿತು, ರಾಜೀವ್ ಗಾಂಧಿ ಚೈತನ್ಯ ಯೋಜನೆ ಅಡಿಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬಸಮ್ಮ ಬಸಣ್ಣ ದೇಸಾಯಿ, ತಾಪಂ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಬಸವರಾಜ ತಂಬಾಕಿ ವರದಿಗಳನ್ನು ವಾಚನ ಮಾಡಿದರು. ದತ್ತಾತ್ರೇಯ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ಗ್ರಾಪಂ ಸದಸ್ಯರುಗಳಾದ ಬಸಣ್ಣ ದೊರಿ, ಸೂಗಪ್ಪ ಚಂದಾ, ನಾಗರಾಜ ಚಂದಾ, ಶರಣು ದಂಡಿನ್, ಆದಯ್ಯಸ್ವಾಮಿ ಮಠ, ಮುರಿಗೆಣ್ಣ ದೇಸಾಯಿ, ಮೌನೇಶ ಬಂಡೋಳಿ, ಮೇಲಪ್ಪ ಗುಳಗಿ, ಬಸವರಾಜ ಸಜ್ಜನ್, ಬಾಬು ಚೌದ್ರಿ, ಮಲ್ಲು ಬಿರೇದಾರ, ಅಂಗನವಾಡಿ ಕಾರ್ಯಕರ್ತೆಯರು, ಕೆಇಬಿ ಅಧಿಕಾರಿಗಳು, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಇತರರು ಇದ್ದರು.
25ರಂದು ಸವಿ ಸವಿ ನೆನಪು ಕೃತಿ ಲೋಕಾರ್ಪಣೆ
ಶಹಾಪುರ: ತಾಲೂಕಿನ ಸಹೃದಯಿ ಬಳಗದ ವತಿಯಿಂದ ವಿಶಾಲ ದೋರನಹಳ್ಳಿಯವರ ಸವಿಸವಿ ನೆನಪು ಕೃತಿ ಬಿಡುಗಡೆ ಸಮಾರಂಭವನ್ನು ಡಿ. 25ರಂದು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ (ಬಾಲಕಿಯರ) ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಈ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಬೆಳಗಾವಿಯ ಶ್ರೀ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಂಗರಾಜ ವನದುರ್ಗರವರು ಉದ್ಘಾಟನೆ ಆಶಯ ಭಾಷಣ ಮಾಡುವರು. ಪ್ರೊ.ಸೂಗಯ್ಯ ಹಿರೆಮಠರವರು ಅಧ್ಯಕ್ಷತೆ ವಹಿಸುವರು. ಇಂಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಚಿದಾನಂದ.ಎಂ. ಬಂಡಗಾರ ಕೃತಿ ಬಿಡುಗಡೆ ಮಾಡುವರು. ನಯನ ಕೆ.ಜೆ ಕೃತಿ ವಿಮರ್ಶೆ ಮಾಡುವರು. ಸಾಹಿತಿ ಬುದ್ಧಘೋಷ ದೇವೀಂದ್ರ ಹೆಗ್ಡೆ, ಶಿವರಂಜನ ಸತ್ಯಂಪೇಠ, ಡಾ. ಬಸವರಾಜ ಇಜೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಇಂದು ಸಭೆ
ಗುರುಮಠಕಲ್: ಗಂಗಾಮತ ಕೋಲಿ ಸಮಾಜದ ಸಭೆಯನ್ನು ಗುರುಮಠಕಲಲ್ನ ಮಾತಮಾಣಿಕೇಶ್ವರಿ ಆಶ್ರಮದಲ್ಲಿ ಡಿ. 22ರಂದು ಬೆಳ್ಳಿಗೆ 11 ಗಂಟಗೆ ಹಮ್ಮಿಕೊಳಲಾಗಿದೆ. ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಈ ಸಭೆಗೆ ಸಮಾಜದ ಪ್ರತಿಯೊಬ್ಬರೂ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಲು ಅಧ್ಯಕ್ಷ ಚುಕ್ಕಪ್ಪ ನಾಯಕ ತಿಳಿಸಿದ್ದಾರೆ.