27ರಂದು ಲಿಂಗ ಪತ್ತೆ ನಿಷೇಧ ಕಾಯ್ದೆ ಕಾರ್ಯಾಗಾರ
ಯಾದಗಿರಿ: ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಾರ್ಯಾಲಯ ಯಾದಗಿರಿ ಜಿಲ್ಲೆಯ ಮೂರು ತಾಲೂಕಿನ ತಹಸೀಲ್ದಾರರು, ಮಾಧ್ಯಮ ಪ್ರತಿನಿಧಿಗಳು, ಐಎಂಎ ಮತ್ತು ಎಫ್‌ಓಜಿಎಸ್‌ಐ ಸದಸ್ಯರು ರೇಡಿಯಾಲಜಿಸ್ಟ್, ಮಕ್ಕಳ ತಜ್ಞರು, ಸರ್ಕಾರೇತರ ಸಂಘ ಸಂಸ್ಥೆಗಳು ಸದಸ್ಯರಿಗಾಗಿ ಹೆರಿಗೆಯ ಮುನ್ನ ಲಿಂಗ ಪತ್ತೆ ಮಾಡುವ ತಂತ್ರ ನಿಷೇಧ ಕಾಯಿದೆ ( ಪಿಸಿಪಿಎನ್‌ಡಿಟಿ) ಕುರಿತು ಕಾರ್ಯಾಗಾರವನ್ನು ಡಿ. 27ರಂದು ಡಿಎಚ್‌ಓ ಕಚೇರಿ ಸಭಾಂಗಣದಲ್ಲಿ ಮುಂಜಾನೆ 10.30 ಗಂಟೆಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಉದ್ಫಾಟಿಸುವರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ವಿದ್ಯಾವತಿ ಎಸ್. ಅಕ್ಕಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ. ಆರೋಗ್ಯ ಮತ್ತು ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ನಿಂಗಪ್ಪ ಹಯ್ಯಾಳಪ್ಪನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಟಿ. ತಳವಾರ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವಕುಮಾರ ಕುಲಕರ್ಣಿ ಉಪಸ್ಥಿತರಿರುವರು.