ಅಡುಗೆಗೆ ಸ್ವಚ್ಛ ನೀರು ಬಳಸಿ: ರಾಂಪುರೆ
ಚಿತ್ತಾಪುರ: ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಪಂ ವತಿಯಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿ ಡಾ. ನಂದಾ ರಾಂಪುರೆ ಉದ್ಘಾಟಿಸಿ ಮಾತನಾಡಿ, ಅಡುಗೆ ಮಾಡುವಾಗ ಕೈ ಸ್ವಚ್ಛವಾಗಿ ತೊಳೆದುಕೊಂಡು ಸ್ವಚ್ಛವಾದ ನೀರು ಉಪಯೋಗಿಸಿಕೊಂಡು ಅಡುಗೆ ಸಿದ್ದ ಮಾಡಬೇಕು. ಇಲ್ಲವಾದರೆ ಕೈ ಉಗುರಿನಲ್ಲಿರುವ ಕ್ರಿಮಿಕೀಟಗಳು, ಸಣ್ಣ ಸಣ್ಣ ಬ್ಯಾಕ್ಟರಿಯಾಗಳು ಸೇರಿಕೊಂಡಿರುತ್ತವೆ. ಇದರಿಂದ ಅನೇಕ ರೋಗ ರುಜಿನಗಳು ಬರುತ್ತವೆ ಎಂದರು.
ಅಗ್ನಿ ಶಾಮಕ ದಳದ ಅಧಿಕಾರಿ ದಶರಥ ಜಮಾದಾರ ಮಾತನಾಡಿ, ಅಡುಗೆ ಮಾಡುವಾಗ ಕಡ್ಡಾಯ ಕಾಟನ್ ಬಟ್ಟೆ ಧರಸಿಬೇಕು. ಇದರಿಂದ ಬೆಂಕಿಯಿಂದ ಜರುಗುವ ಅನಾಹುತ ನಿಯಂತ್ರಸಬಹುದು. ಅಡುಗೆ ಅನಿಲ ಸೋರಿಕೆಯಾಗದಂತೆ ಮುಂಜಾಗ್ರಕತೆ ವಹಿಸಿ, ಬೆಂಕಿ ಹತ್ತಿದರೆ ಅದನ್ನು ಅಗ್ನಿ ನಂದಕ ಯಂತ್ರದ ಸಹಾಯದಿಂದ ನಂದಿಸಬೇಕು ಎಂದು ಸಲಹೆ ನೀಡಿ ಅದನ್ನು ಪ್ರಾಯೋಗಿಕವಾಗಿ ಉಪಯೋಗಿಸಿ ತೋರಿಸಿದರು.
ಗುರು ಗ್ಯಾಸ್ ವ್ಯವಸ್ಥಾಪಕ ರಾಜು ಅವರು ಅಡುಗೆ ಗ್ಯಾಸ್ ಬಳಕೆ ವಿಧಿ ವಿಧಾನ ಕುರಿತು ಮಾಹಿತಿ ನೀಡಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ತೆಲ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ನೌಕರ ಸಂಘದ ಗೌರವ ಅಧ್ಯಕ್ಷ ವಿಜಯಕುಮಾರ್ ಲೋಡ್ಡೆನೋರ, ಪ್ರೌಢಶಾಲೆ ಮುಖ್ಯಗುರು ಲಿಂಗಣ್ಣ ಮಲ್ಕನ್, ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಸಂಗೀತಾ ಗುತ್ತೇದಾರ, ದೈಹಿಕ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರರಡ್ಡಿ ದೂಗನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಯ ಅಡುಗೆ ಸಿಬ್ಬಂದಿ ಭಾಗವಹಿಸಿದ್ದರು. ರಾಮಾಚಾರ್ಯ ಸ್ವಾಗತಿಸಿದರು. ಶಿಕ್ಷಕ ಕಾಶಿರಾಯ ಕಲಾಲ್ ನಿರೂಪಿಸಿದರು. ಅರುಣಕುಮಾರ್ ಸುಲೇಗಾಂವ ವಂದಿಸಿದರು.