ಅನುವುಗಾರರ ಸಮಾವೇಶ ಇಂದು
ಚಿಂಚೋಳಿ: ರೈತರ ದಿನಾಚರಣೆ ನಿಮಿತ್ತ 2013-14ನೇ ಸಾಲಿನ ಭೂ ಚೇತನ ಯೋಜನೆ 2 ಅಡಿಯಲ್ಲಿ ಹಿಂಗಾರು ಹಂಗಾಮಿನ ತಾಲೂಕು ಮಟ್ಟದ ಅನುವುಗಾರರ ಸಮಾವೇಶ ಡಿ.23ರಂದು ಚಂದಾಪುರ ರೈತ ಸಂಪರ್ಕ ಕೇಂದ್ರ (ಬೀಜೋತ್ಪಾದನಾ ಕೇಂದ್ರ)ದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ತಾಪಂ ಹಂಗಾಮಿ ಅಧ್ಯಕ್ಷೆ ತಾರಾಮತಿ ಕುಂಬಾರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಪಂ ಅಧ್ಯಕ್ಷೆ ಇಂದುಮತಿ ಸ್ವಾಮಿ, ಉಪಾಧ್ಯಕ್ಷ ಶಾಮರಾವ ಕೊರವಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಸಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ. ರಾಜು ತೆಗ್ಗೆಳ್ಳಿ ಹಾಗೂ ಡಾ. ಜಹೀರ್ ಅಹ್ಮದ್ ಉಪನ್ಯಾಸ ನೀಡುವರು. ತಾಲೂಕು ಪ್ರಗತಿಪರ ರೈತರಾದ ಬಾಬುರಾವ ಪಾಟೀಲ್, ಅಶೋಕ ಪಾಟೀಲ್, ಬಕ್ಕಪ್ಪ ಕಾಮಣಿ, ಜನಾರ್ಧನರೆಡ್ಡಿ, ರಾಜಶೇಖರ ಜಾಡರ್, ಭೀಮರೆಡ್ಡಿ ಯಂಗಮ ಮುಂತಾದವರು ಆಗಮಿಸಲಿದ್ದಾರೆ. ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.