ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕಳಪೆ ಔಷಧದಿಂದ ಎಚ್ಚೆತ್ತುಕೊಳ್ಳಿ'

Mainashree
Updated On : 23 Dec 2013, 11:17 am

ಗುಲ್ಬರ್ಗ: ಯಾವುದೇ ಸಂದರ್ಭದಲ್ಲಿ ಅಜ್ಞಾನದಿಂದ ವಿತರಣೆಯಾಗುವ ಔಷಧದಿಂದ ದುರಂತವನ್ನು ಕಾಣುವ ಬದಲು ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಸರ್ಕಾರಿ ಫಾಮಸಿಸ್ಟರ್ ಸಂಘ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯ ಮತ್ತು ಫಾರ್ಮಸಿಸ್ಟರ್ ಮಧ್ಯ ರೋಗಿ ಗುಣಮುಖವಾಗುವ ನಿಟ್ಟಿನಲ್ಲಿ ಕ್ರೀಯಾಶೀಲತೆ ಮುಖ್ಯವಾಗಿರುತ್ತದೆ. ವೈದ್ಯರಿಗಿಂತ ಫಾರ್ಮಸಿಸ್ಟರ್ ಸೇವೆ ರೋಗಿ ಜೀವನದಲ್ಲಿ ಪ್ರಮುಖವಾಗಿ ಕಾಣುವ ವೃತ್ತಿ ಎಂದರು.
ಫಾರ್ಮಸಿಸ್ಟರ್ ನ್ಯಾಯಬದ್ಧ ಹಕ್ಕುಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಚಿವ ಖರ್ಗೆ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲಪಾಂಡು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎ. ಪುಟ್ಟಸ್ವಾಮಿ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಶಾಸಕ ಜಿ. ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣಗೌಡ ಸಂಕನೂರ, ವಿವಿಧ ಜಿಲ್ಲೆಗಳಿಂದ ಸರ್ಕಾರಿ ಫಾರ್ಮಸಿಸ್ಟರ್‌ಗಳು ಭಾಗವಹಿಸಿದ್ದರು.
ಸಂಚಾಲಕ ಬಿ.ಎಸ್. ದೇಸಾಯಿ ಸ್ವಾಗತಿಸಿದರು. ಅಧ್ಯಕ್ಷ ಕೆ. ಕೆಂಪಯ್ಯ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಟಿ. ಶಿವರಾಜು ಬೇಡಿಕೆ ಪತ್ರವನ್ನು ವಾಚಿಸಿದರು. ಕಾರ್ಯಾಧ್ಯಕ್ಷ ಎಂ. ನಂಜಯ್ಯ ವಂದಿಸಿದರು. ಸಮಾರಂಭದ ನಂತರ ವಿವಿಧ ವೈಜ್ಞಾನಿಕ ಗೋಷ್ಠಿಗಳು ನಡೆದವು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement