ಬಸ್ ಘಟಕಕ್ಕೆ ಶಾಸಕ ಭೇಟಿ: ತರಾಟೆಗೆ
ಅಫಜಲ್ಪುರ: ತಾಲೂಕಿನ ಶಾಸಕ ಮಾಲೀಕಯ್ಯ ಗುತ್ತೇದಾರ ಬಸ್ ಘಟಕಕ್ಕೆ ಭೇಟಿ ನೀಡಿ ಬಸ್ ಬಿಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ತಾಲೂಕಿನ ಹಳ್ಳಿಗಳಿಗೆ ಮತ್ತು ಹೊಸಪೇಟೆ, ಬೆಂಗಳೂರ, ಪೂನಾಗಳಿಗೆ ಬಸ್ ಯಾಕೆ ಹೊಗುತ್ತಿಲ್ಲ. ಮುಂದೆ ಈ ಘಟನೆ ಮರು ಕಳಿಸದಂತೆ ಎಚ್ಚರ ವಹಿಸಬೇಕು. ಏನಾದರೂ ತೊಂದರೆ ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರಬೇಕೆಂದು ಎಚ್ಚರಿಸಿದರು. ಬಸ್ ಘಟಕದ ವ್ಯವಸ್ಥಾಪಕರು ರಸ್ತೆ ಜತೆಗೆ ಬಸ್ಸುಗಳು ಕೆಟ್ಟಿವೆ ಎಂದು ಅಳಲು ತೋಡಿಕೊಂಡರು. ಪ್ರತಿಯಾಗಿ ರಸ್ತೆ ನೋಡಿಕೊಂಡು ಬಸ್ಸು ನಡೆಸಿದರೆ ಯಾಕೆ ಬಸ್ಸು ಕೆಡುತ್ತವೆ ಅಂತಹ ಬಸ್ಸ್ ಚಾಲಕರ ವಿರುದ್ಧ ಕ್ರಮ ಜರುಗಿಸಿ ಎಂದು ಶಾಸಕರು ಹೇಳಿದರು. ಈಗಾಗಲೇ ಘತ್ತರಗಾದಿಂದ ದುಧನಿಯವರೆಗೆ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಸೋಲಾಪುರನಿಂದ ಹೊಸೂರವರೆಗೆ, ಚೌಡಾಪುರನಿಂದ ಮಾಶ್ಯಾಳವರೆಗೆ ಮತ್ತು ಕರಜಗಿಯಿಂದ ಹೊಸೂರವರೆಗೆ ರಸ್ತೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಮತ್ತು ಸಾರಿಗೆ ಸಚಿವರಿಗೆ ಮನವಿ ಮಾಡಿ ಇನ್ನೂ 40 ಬಸ್ಸು ತರುವ ವ್ಯವಸ್ಥೆ ನಡೆದಿದೆ ಎಂದು ಹೇಳಿದರು.