ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರೈತನ ಕುಟುಂಬ ಸಾಲ ಮನ್ನಾ ಮಾಡಿ'

Mainashree
Updated On : 23 Dec 2013, 11:22 am

ಗುಲ್ಬರ್ಗ: ಈಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಪಾಣೆಗಾಂವ್ ರೈತ ಸಂಜೀವಕುಮಾರ್ ಲಕ್ಷ್ಮಣ ರಾಠೋಡ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ನೀಡಬೇಕು, ಅವರ ಬ್ಯಾಂಕಿನ ಸಾಲ ಮನ್ನಾ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡು ಜಿಪಂ ಉಪಾಧ್ಯಕ್ಷೆ ಅನಿತಾ ವಳಕೇರಿ ಮನವಿ ಸಲ್ಲಿಸಿದ್ದಾರೆ. ಸಂಜೀವ ಕುಮಾರಗೆ ವಯಸ್ಸಾದ ತಂದೆ- ತಾಯಿ ಹಾಗೂ ಬಂಧುಗಳಿದ್ದಾರೆ. ಇವರೇ ಮನೆಗೆ ಹಿರಿಯರು. 6 ಎಕರೆ ಹೊಲವಿದೆ. ಸದರಿ ಜಮೀನಿನಲ್ಲಿ 3 ವರ್ಷದಿಂದ ಯಾವುದೇ ಬೆಳೆ ಬಂದಿಲ್ಲ. ಇದರಿಂದ ಸಾಲದ ಭಾರ ಹೆಚ್ಚಾಗಿದೆ. ಖಾಸಗಿಯಾಗಿ 1 ಲಕ್ಷ ಸಾಲ ಹೊಂದಿದ್ದರು. ಇವರ ಬ್ಯಾಂಕಿನ ಸಾಲ ಮನ್ನಾ ಮಾಡಬೇಕು. 5 ಲಕ್ಷ ಪರಿಹಾರ ಇವರ ಕುಟುಂಬ ಸದಸ್ಯರಿಗೆ ನೀಡಬೇಕೆಂದು ಮನವಿಯಲ್ಲಿ ಅನಿತಾ ವಳಕೇರಿ ಆಗ್ರಹಿಸಿದ್ದಾರೆ.
ಶ್ಯಾಮಸುಂದರ ಜನ್ಮದಿನೋತ್ಸವ
ಗುಲ್ಬರ್ಗ: ಇಲ್ಲಿನ ಸೇಡಂ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ತಿರುವಿನಲ್ಲಿರುವ ವೃತ್ತದಲ್ಲಿ ಹೋರಾಟಗಾರ, ಶೋಷಿತ ಸಮುದಾಯದ ನಾಯಕ ಬಿ. ಶ್ಯಾಮಸುಂದರ್ ಅವರ 106ನೇ ಜನ್ಮೋತ್ಸವವನ್ನು ಬಲು ಶ್ರದ್ಧೆ- ಗೌರವಗಳಿಂದ ಆಚರಿಸಲಾಯಿತು. ಈ ಸಮಾರಂಭದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಶ್ಯಾಮಸುಂದರ್ ಅವರ ಹೋರಾಟಗಳು, ಅವರ ಸಾಧನೆಗಳನ್ನು ಮೆಲಕು ಹಾಕಿದರು.
ಹಿರಿಯ ಸಾಹಿತಿ ಚೆನ್ನಣ್ಣ ವಾಲೀಕಾರ್, ಜಿಡಿಎ ಆಯುಕ್ತ ರವಿಕಿರಣ ಒಂಟಿ, ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟೀಮನಿ, ಅರುಣಾ ಪಾಟೀಲ್ ರೇವೂರ್ ಜಯಂತ್ಯುತ್ಸವ ಸಮಿತಿ ಸದಸ್ಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement