ವೈಭವದಿಂದ ಜರುಗಿದ ಛಟ್ಟಿ ಉತ್ಸವ
ಜೇವರ್ಗಿ: ಹನುಮಾನ ಮಂದಿರದಲ್ಲಿ ಛಟ್ಟಿ ಉತ್ಸವ ಶನಿವಾರ ಸಂಭ್ರಮ ಸಡಗರದಿಂದ ಜರುಗಿತು.
ಛಟ್ಟಿ ಉತ್ಸವದ ಅಂಗವಾಗಿ ಹನುಮಾನ ದೇವರಿಗೆ ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಯಿತು. ಸಹಸ್ರಾರು ಭಕ್ತಾದಿಗಳಿಗೆ ಸಜ್ಜೆರೊಟ್ಟಿ, ಭಜ್ಜಿ ಪಲ್ಲೆ ಪ್ರಸಾದ ವಿತರಿಸಲಾಯಿತು. ಛಟ್ಟಿ ಉತ್ಸವದಲ್ಲಿ ಅಶೋಕ ಸಾಹು ಗೋಗಿ, ಬಸವರಾಜ ಪಾಟೀಲ್ ನರಿಬೋಳ, ಬಸವರಾಜ ಸಾಹು ಗೋಗಿ, ಶಿವಶರಣಪ್ಪಗೌಡ ಮಾಲಿಪಾಟೀಲ್, ದಂಡಪ್ಪಗೌಡ ಪೊಲೀಸ್ ಪಾಟೀಲ್, ಸಾಹೇಬಗೌಡ ಕಲ್ಲಾ, ಬಾಪುರಾವ ಪಾಗಾ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ರಾಜಶೇಖರ ಕಲ್ಮಠ, ಶರಣಪ್ಪ ನರಿಬೋಳಿ, ಅಪ್ಪಣ್ಣ ಕೋಳಕೂರ, ವಿಶ್ವನಾಥ ಕಲ್ಲಾ, ಪಂಚಯ್ಯಸ್ವಾಮಿ ಮಠಪತಿ, ಬಸವರಾಜ ಶಿವಣ್ಣಿ, ಕಲ್ಲಪ್ಪ ಬಡಿಗೇರ ಸೇರಿದಂತೆ ಪಟ್ಟಣದ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.