ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಇಲಾಖೆ ಪ್ರಯೋಜನ ಪ್ರತಿ ರೈತರಿಗೂ ತಲುಪಲಿ'

Vishwanath S
Updated On : 25 Dec 2013, 12:23 pm

ಕನ್ನಡಪ್ರಭ ವಾರ್ತೆ ,  ಚಿತ್ತಾಪುರ ,  ಡಿ.24
ಸರ್ಕಾರವು ರೈತರಿಗೆ ಅನೇಕ ಯೋಜನೆಗಳನ್ನು ಹಾಗೂ ಬೆಳೆ ಬೆಳೆಯಲು ಬಳಸಬೇಕಾದ ಆಧುನಿಕ ತಂತ್ರಜ್ಞಾನಗಳ ಮಾಹಿತಿಗಳು ಒದಗಿಸುತ್ತಿದ್ದು, ಇದನ್ನು ಪ್ರತಿಯೊಬ್ಬ ರೈತರಿಗೂ ಇಲಾಖೆಯ ಅನುವುಗಾರರ ಮುಖಾಂತರ ತಲುಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಲ್ಲಿ ರೈತರು ಹೊಸ ಹೊಸ ವಿಧಾನ ಅಳವಡಿಸಿಕೊಂಡು ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಹೇಳಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಸರ್ಕಾರ ರೈತರಿಗೆ ಅನೇಕ ಸೌಲಭ್ಯಗಳು, ಹೊಸ ತಂತ್ರಜ್ಞಾನಗಳ ಮೂಲಕ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುತ್ತಿದ್ದರು, ರೈತರು ಆರ್ಥಿಕವಾಗಿ ಸಬಲರಾಗುತ್ತಿಲ್ಲ ಎಂದರು.
ಕೆವಿಆರ್ ರದ್ದೇವಾಡಗಿ ಪ್ರಾಧ್ಯಾಪಕ ಡಾ. ಬಸವರಾಜ ಬಿರಾದಾರ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ರಾಜಶೇಖರ ಬಸನಾಯಕ ಮಾತನಾಡಿದರು. ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಶೇಖರ ಪರಸರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷ ಸಂತೋಷ ಚಾಮನೂರ, ಮುಖಂಡರಾದ ನಾಗರೆಡ್ಡಿ ಗೋಪಶೇನ್, ಶಿವಶರಣಪ್ಪ ಉಟಗೂರ, ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ಕನಕ ಇತರರು ಇದ್ದರು.
ತಾಲೂಕಿನಲ್ಲಿ ಹೊಸ ತಂತ್ರಜ್ಞಾನದ ಮೂಲಕ ಅಲೂಗಡ್ಡೆ, ಶುಂಠಿಯನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದ ಪ್ರಗತಿಪರ ರೈತರಾದ ಸತ್ಯನಾರಾಯಣ ಯಾದವ ಹಾಗೂ ಅಯ್ಯಪ್ಪ ಸಿದ್ದಣ್ಣ ರೈತರಿಗೆ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಜಯಪ್ರಕಾಶ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement