ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕೃಷಿ ಕ್ಷೇತ್ರಕ್ಕೆ ಯುವಕರ ಸೆಳೆಯಲು ಭತ್ಯೆ ನೀಡಿ'

Vishwanath S
Updated On : 25 Dec 2013, 12:23 pm

ಕನ್ನಡಪ್ರಭ ವಾರ್ತೆ ,  ಆಳಂದ ,  ಡಿ.24
ಕುಟುಂಬದಲ್ಲಿನ ಒಬ್ಬ ಯುವಕರನ್ನಾದರೂ ಆರೋಗ್ಯ, ಶಿಕ್ಷಣದ ಜೊತೆಗೆ ಕೃಷಿಯತ್ತ ಆಕರ್ಷಿಸಿ ಪ್ರೋತ್ಸಾಹಿಸಲು ಸರ್ಕಾರ ವಿಶೇಷವಾದ ಭತ್ಯೆ ನೀಡುವ ಮೂಲಕ ಈ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ದಂಗಾಪುರ ಒತ್ತಾಯಿಸಿದರು.
ತಾಲೂಕಿನ ಹೋಬಳಿ ಕೇಂದ್ರ ನರೋಣಾ ಗ್ರಾಮದ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಸೋಮವಾರ ಕೃಷಿಕ ಸಮಾಜ, ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಏರ್ಪಡಿಸಿದ್ದ ರೈತರ ದಿನಾಚರಣೆ ಹಾಗೂ 2013-14ನೇ ಸಾಲಿನ ಭೂಚೇತನ ಯೋಜನೆಯ 11 ಅಡಿಯಲ್ಲಿ ಹಿಂಗಾರು ಹಂಗಾಮಿನ ತಾಲೂಕು ಮಟ್ಟದ ಅನುವುಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೃಷಿ ಜೊತೆಗೆ ಹಸು, ಪಶು ಸಾಕಾಣಿಕೆ ಲಾಭ ತರುತ್ತದೆ. ನಿರಾಸೆ ಪಡದೆ ಆಶಾವಾದಿಗಳಾಗಿ ಬದುಕು ನಡೆಸಬೇಕು ಸಲಹೆ ನೀಡಿದ ಅವರು, ತೊಗರಿ ಬಡವರ ಬೆಳೆಯಾಗಿದೆ. ಅದಕ್ಕೆ ಸರ್ಕಾರ ಶೀಘ್ರವೇ ಬೆಂಬಲ ಬೆಲೆ ಘೋಷಿಸಿ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ, ಕೃಷಿಕ ಸಮಾಜದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಕೊರಳ್ಳಿ, ಜಿಲ್ಲಾ ಜಾಗೃತದಳ ಸಹಾಯಕ ಕೃಷಿ ನಿರ್ದೇಶಕ ಜಿ.ಆರ್. ಕೋಟಿ, ಸರಸಂಬಾದ ಪಂಡಿತ ಖಾನಾಪುರೆ, ಶಶಾಂಕ ಶಹಾ, ರೈತ ಆದಿನಾಥ ಹೀರಾ, ಬಾಬುರಾವ ಹಿರೇಮಶೆಟ್ಟಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ನಾಟಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಸದಸ್ಯ ಮಲ್ಲಿಕಾರ್ಜುನ ಮೊದಲಿ, ಬಸವರಾಜ ಚಕ್ಕಿ, ಮಹ್ಮದ್ ಹನೀಫ್ ಬಾಲವಾಲೆ, ರಾಜಶೇಖರ ಪಾಟೀಲ್ ಗೋಳಾ, ಅಧಿಕಾರಿ ಸಿದ್ರಾಮ ಬುಕ್ಕೆ, ಆತ್ಮಾಧಿಕಾರಿ ಶಂಕರ ಗೋಂಧಳಿ, ನಿಂಬರ್ಗಾ ಅಧಿಕಾರಿ ವಿಠೋಬಾ ದಾವಡೆ ಇದ್ದರು. ಮಲ್ಲಿನಾಥ ನಂದರ್ಗಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಎನ್.ಎಸ್. ವಾಲಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement