ಕೇಂದ್ರೀಯ ವಿವಿ ಕುಲಪತಿ ಹೇಳಿಕೆಗೆ ಖಂಡನೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.25
ಗುಲ್ಬರ್ಗದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಬೋಧಕ ಹುದ್ದೆಗಳ ನೇಮಕಾತಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಅನ್ವಯವಾಗುವುದಿಲ್ಲ ಎಂದಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎಸ್. ಮೂರ್ತಿ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪರಶುರಾಮ ನಸಲವಾಯಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಕ್ಷಣ ನೇಮಕಾತಿ ತಡೆಹಿಡಿಯಬೇಕು ಹಾಗೂ ನೇಮಕಾತಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಅನ್ವಯವಾಗುವಂತೆ ಆದೇಶ ಹೊರಡಿಸಿ ನೇಮಕಾತಿ ಪ್ರಾರಂಭಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಮತ್ತು ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ವಿಶ್ವವಿದ್ಯಾಲಯದ ಕುಲಪತಿ ಮುಖಾಂತರ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಮೇಶ ಲೋಹಾರ, ಪೂಜಾ ರಮೇಶ ಲೋಹಾರ, ಶರಣು ಸಜ್ಜನ್, ವಿನೋದ ರಾಠೋಡ, ಶೈಲೇಶ ಗುಣಾರಿ, ರಾಮಚಂದ್ರ ರೆಡ್ಡಿ, ಸಂತೋಷ ಮಲ್ಲಾಬಾದಿ, ಉಮೇಸ ಪಾಟೀಲ್, ಬಸವರಾಜ ಮದ್ರಕಿ, ನಾಗರಾಜ ಮಹಾಗಾಂವಕರ್, ಬಸವರಾಜ ಜವಳಿ, ಅಮರೇಶ, ಹಣಮಂತ ರೆಡ್ಡಿ ಇತರರು ಭಾಗವಹಿಸಿದ್ದರು.