ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊಲ್ಲೂರ ಆರೋಗ್ಯ ಕೇಂದ್ರ ವೈದ್ಯರಿಗೆ ಬೇಕಿದೆ 'ಚಿಕಿತ್ಸೆ'

Vishwanath S
Updated On : 26 Dec 2013, 11:23 am

ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಕೊಲ್ಲೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಾನಕರ್ ದಿಢೀರ್ ಭೇಟಿ ನೀಡಿ ಹಾಜರಿ ಪುಸ್ತಕ ಪರಿಶೀಲನೆ ನಡೆಸಿ, ಆಸ್ಪತ್ರೆ ಕುರಿತು ಗ್ರಾಮಸ್ಥರ ದೂರುಗಳನ್ನು ಆಲಿಸಿದರು.
ತಕರಕಸಪೇಟ್ ಗ್ರಾಮಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲದೆ ಇರುವುದು, ಕಳೆದ ನಾಲ್ಕು ದಿನಗಳಿಂದ ಹಾಜರಿ ಪುಸ್ತಕದಲ್ಲಿ ಸಹಿ ಮಾಡದೆ ಇರುವುದು ಕಂಡು ಬಂದಿತು. ಇನ್ನೊಬ್ಬ ಸಿಬ್ಬಂದಿಯು ಕೆಲಸಕ್ಕೆ ಬಾರದೆ ಇರುವುದೂ ಬೆಳಕಿಗೆ ಬಂದಿತು.
ಗ್ರಾಮಸ್ಥರಾದ ರಾಚಯ್ಯ ಸ್ವಾಮಿ ಅವರು ಆಸ್ಪತ್ರೆಗೆ ವೈದ್ಯಾಧಿಕಾರಿಗಳು ಬಾರದೆ ಇದ್ದುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆಂದು ದೂರಿದರು. ಅಲ್ಲದೆ, ಸರ್ಕಾರ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರೆ ಇಲ್ಲದೆ ಇರುವುದರಿಂದ ಆಸ್ಪತ್ರೆಗೆ ಯಾವುದೇ ಬೆಲೆ ಇಲ್ಲದಂತಾಗಿದ್ದು, ಒಂದಿಬ್ಬರು ನರ್ಸಗಳು ಮಾತ್ರ ಸ್ಥಳದಲ್ಲಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಹೇಳಿದರು.ಆಸ್ಪತ್ರೆಯಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆ ಸಿಬ್ಬಂದಿ ತಾಲೂಕು ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement