ಪರ್ಯಾಯ ಇಂಧನ ರಚನೆ ಅವಶ್ಯ: ಜೈನ್
ಸೇಡಂ: ಪರ್ಯಾಯ ಇಂಧನ ಇಂದಿನ ದಿನಗಳಲ್ಲಿ ಅವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಯುವಕರು ಹೊಸ ಹೊಸ ಅವಿಷ್ಕಾರಗಳನ್ನು ಸ್ಥಾಪಿಸಬೇಕಾಗಿದೆ ಎಂದು ವಾಸವದತ್ತಾ ಸಿಮೆಂಟ್ ಘಟಕದ ಮುಖ್ಯಸ್ಥ ಚಂದ್ರೇಕುಮಾರ್ ಜೈನ್ ಅಭಿಪ್ರಾಯಪಟ್ಟರು.
ಇಲ್ಲಿನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಇಂಧನ ಉಳಿತಾಯ ಸಪ್ತಾಹದ ಸಮಾರೋಪ ಹಾಗೂ ಕೈಜನ್ ಮೇಳವನ್ನು ಉದ್ಘಾಟಿಸಿದ ಅವರು, ಇಂಧನ ಉಳಿತಾಯದ ಬಗ್ಗೆ ಯುವಕರ ಕಾಳಜಿ ಅಗತ್ಯ ಎಂದರು.
ವಿದ್ಯುತ್ ವಿಭಾಗದ ಮುಖ್ಯಸ್ಥ ಪಿವಿಎನ್ ಮಲ್ಲೇಶ್ವರರಾವ, ವಿದ್ಯುತ್ ಉತ್ಪಾದನಾ ಕೇಂದ್ರದ ಮುಖ್ಯಸ್ಥ ಅರವಿಂದ ನಾಯಕ ಮಾತನಾಡಿದರು.
ಇಂಧನ ಉಳಿತಾಯ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಮತ್ತು ತಮ್ಮ ನಿತ್ಯದ ಕಂಪನಿಯ ಕೆಲಸದಲ್ಲಿ ಇಂಧನ ಉಳಿತಾಯ ಕುರಿತು ಮತ್ತು ಉತ್ಪಾದನೆ ಹೆಚ್ಚಿಸುವಂತಹ ಸಾಧನೆ ಮಾಡಿದ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಸಿವಿಲ್ ವಿಭಾಗದ ಮುಖ್ಯಸ್ಥ ಎಸ್.ಎಸ್. ರಾವ, ವಾಸವದತ್ತಾ ವಿದ್ಯಾ ವಿಹಾರ ಶಾಲೆಯ ಉಪ ಪ್ರಾಂಶುಪಾಲೆ ಸುನೀತಾ ಕುಲ್ಕರ್ಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜಶ್ರೀ ಸಿಮೆಂಟನ ರಾಜೀವ ತ್ರಿವೇದಿ, ಎಂ.ಕೆ.ಬಾಳಗಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ವಿದ್ಯುತ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶ್ರೀನಿವಾಸು ವಂದಿಸಿದರು.