ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿಡಿಒಗಳು ಮಾನಸಿಕ, ಬೌದ್ಧಿಕವಾಗಿ ಸದೃಢರಾಗಿ

Vishwanath S
Updated On : 26 Dec 2013, 11:22 am

ಗುಲ್ಬರ್ಗ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಆಯಾ ಕ್ಷೇತ್ರಗಳ ಶಾಸಕರಿಂದ ಹಿಡಿದು ಗ್ರಾಮದ ಪ್ರತಿಯೊಬ್ಬ ನಾಗರಿಕರ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಮಾನಸಿಕ ಹಾಗೂ ಬೌದ್ಧಿಕ ಸದೃಢವಾಗಬೇಕೆಂದು ಜಿಪಂ ಅಧ್ಯಕ್ಷ ರಮೇಶ ಮರಗೋಳ ಸಲಹೆ ನೀಡಿದರು.
ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪಿಡಿಒಗಳಿಗೆ ಒಂದುವರೆ ತಿಂಗಳ ಬುನಾದಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಯೋಜನೆಗಳನ್ನು ತಲುಪಿಸಿ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಕಾನೂನು ಚೌಕಟ್ಟು ಮೀರಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ತಪ್ಪಿದಲ್ಲ. ಪಿಡಿಒಗಳು ಒಗ್ಗಟ್ಟಿನಿಂದ, ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದು, ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಬಡ ಗ್ರಾಮೀಣ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕು ಎಂದರು.
ಜವಾಬ್ದಾರಿಯುತ ಹುದ್ದೆ: ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್ ಮಾತನಾಡಿ, ಪಿಡಿಒ ಹುದ್ದೆಯು ಜವಾಬ್ದಾರಿಯುತ ಹುದ್ದೆಯಾಗಿದ್ದು, ಹುದ್ದೆಯ ಘನತೆಗೆ ತಕ್ಕಂ ತೆ ಹಾಗೂ ಸರ್ಕಾರಿ ನೌಕರರಂತೆ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದರು.
ಇತ್ತೀಚಿಗೆ ಕರ್ನಾಟಕ ನಾಗರಿಕ ಸೇವಾ ಆಯೋಗದಿಂದ ಆಯ್ಕೆಗೊಂಡು ಗುಲ್ಬರ್ಗ ಜಿಲ್ಲೆಗೆ ನೇಮಕಗೊಂಡ 48 ಪಿಡಿಒಗಳಿಗೆ ಒಂದುವರೆ ತಿಂಗಳ ಕಾಲ ಬುನಾದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ಆಡಳಿತ, ಪಂಚಾಯ್ತಿ ವ್ಯವಸ್ಥೆ, ಪಿಡಿಒ ಕರ್ತವ್ಯ, ಗಣಕಯಂತ್ರ ತರಬೇತಿ, ಸಕಾಲ್, ಪಂಚಾಯತಿ ಪ್ರಕಾರಗಳು, ಲೆಕ್ಕಪತ್ರ ಹಾಗೂ ಕಾನೂನು ವಿಷಯಗಳ ಬಗ್ಗೆ ತರಬೇತಿ ನೀಡಲಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಅನೀತಾ ಪವನಕುಮಾರ್ ವಳಕೇರಿ, ಜಿಪಂ ಪ್ರಭಾರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ಹೊನ್ನಲಿಂಗಪ್ಪ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಭೀಮನಗೌಡ, ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸುಲೋಚನಾ ಸಕ್ರಿ, ರಾಜಕುಮಾರ್ ಮಹಾಲಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement