ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯೇಸು ವಿಶ್ವಕ್ಕೆ ಶಾಂತಿ ಸಂದೇಶ ಸಾರಿದರು..

Vishwanath S
Updated On : 26 Dec 2013, 11:26 am

ಸುರಪುರ: ಜೀವನದಲ್ಲಿ ಮನುಷ್ಯ ಸತ್ಯ, ನಿಷ್ಠೆಯಿಂದ ನಡೆದುಕೊಳ್ಳುವುದೇ ಧರ್ಮ ಎಂದು ಜಿಲ್ಲಾ ಮೇಲ್ವಾಚಾರಕ ನೆಲ್ಸನ್ ಸುಮಿತ್ರಾ ತಿಳಿಸಿದರು.
  ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಲ್ಲಿಯ ಮೇಥೋಡಿಸ್ಟ್ ಚರ್ಚ್‌ನಲ್ಲಿ ವಿಶೇಷ ಸಂದೇಶ ನೀಡಿ ನಂತರ ಶುಭಾಶಯ ಕೋರಿ ಮಾತನಾಡಿದರು.
  ಸಹಾಯಕ ಸಭಾಪಾಲಕ ಪ್ರಕಾಶ ಹಂಚಿನಾಳ, ರೇಣುಕಾ ನೆಲ್ಸನ್, ಸ್ಯಾಮವೇಲ್ ಮ್ಯಾಥ್ಯೂ ಸತ್ಯವೇದ ಪಾರಾಯಾಣ ಮಾಡಿದರು. ಸಮಾಜದ ಜಯಪ್ಪ, ವಿಜಯಕುಮಾರ, ಪ್ರೇಮಕುಮಾರ, ಅಮೀಥಪಾಲ್, ಭಾಸ್ಕರ್ ಮ್ಯಾಥ್ಯೂ, ದೇವಪುತ್ರ, ಪಾಲ್ನಾಯಕ್, ಧರ್ಮಣ್ಣ, ಅನಂತಕುಮಾರ, ಸುನೀಲಾ ಶಾಂತಕುಮಾರ, ಸುಜಾತ, ರಂಗಮ್ಮ, ಶೋಭಾ, ರೇಣುಕಾ, ಸುಕುಮಾರಿ, ಸೋನು, ಡಾ. ಸುಧೀರ ಜಾನ್, ಸುಜಾತ, ಪ್ರಕಾಶ ಇನ್ನಿತರರಿದ್ದರು.
  ಬೆಳಗ್ಗೆ 8ಕ್ಕೆ ಕ್ರೈಸ್ತರಿಂದ ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯಿತು. ಡಿ.29ರ ರಾತ್ರಿ ಚರ್ಚ್‌ನಲ್ಲಿ ಕ್ಯಾಂಡಲ್ ಬೆಳಗಿಸಲಾಯಿತು. ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಬ್ಬದಲ್ಲಿ ವಿಶೇಷ ಸಿಹಿ, ತಿಂಡಿಗಳನ್ನು ನೆಂಟರ, ಸ್ನೇಹಿತರ ಸಮ್ಮುಖದಲ್ಲಿ ಸವಿದರು. ಹಾಗೆಯೇ ಸಮುದಾಯದವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸುತ್ತಿದ್ದುದು ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement