ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವ್ಯಕ್ತಿಯ ಕೊಲೆ

Vishwanath S
Updated On : 26 Dec 2013, 11:24 am

ಗುಲ್ಬರ್ಗ: ಗುಲ್ಬರ್ಗ ಜಿಪಂ ರಾಜಾಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಎಇಇ ಕಂಟೆಪ್ಪ ಬಂದಗಿ ಎಂಬಾತ ಗುಲ್ಬರ್ಗದ ನೆಹರು ಗಂಜ್‌ನ ಗಾಂಧಿ ನಗರದ ನಿವಾಸಿ ಸುಭಾಷ ಪಂಚಾಳ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕಂಟೆಪ್ಪ ಎಂಬಾತ ಸುಭಾಷ ಪಂಚಾಳನನ್ನು ತಿಂಥಣಿ ಮೌನೇಶ್ವರ ಜಾತ್ರೆಗೆ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ತೀವ್ರ ಗಾಯಗೊಂಡು ಗುಲ್ಬರ್ಗದ ಮನೆಗೆ ಬಂದ ಸುಭಾಷ ಪಂಚಾಳ ಕಂಟೆಪ್ಪ ಹಲ್ಲೆ ಮಾಡಿರುವ ಕುರಿತು ಮನೆಯಲ್ಲಿ ಪತ್ರ ಬರೆದು ಮೃತಪಟ್ಟಿದ್ದಾನೆ ಎಂದು ಮೃತಳ ಪತ್ನಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ವ್ಯಕ್ತಿ ಮೇಲೆ ಹಲ್ಲೆ
ಗುಲ್ಬರ್ಗ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಫರಹತಾಬಾದ್ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ತಾಲೂಕಿನ ತಿಳಗೂಳ ಗ್ರಾಮದ ಷಣ್ಮುಖಪ್ಪಗೌಡ ಮಾಲಿಪಾಟೀಲ್ ಗಾಯಗೊಂಡಿದ್ದು, ಈತ ಬಸ್ ನಿಲ್ದಾಣದ ಹತ್ತಿರ ಇರುವ ಶಕ್ತಿ ವೈನ್‌ಶಾಪ್ ಬಳಿಯ ವಸ್ತ್ರದ ಅಂಗಡಿಯ ಮುಂದೆ ನಿಂತಾಗ ವ್ಯಕ್ತಿಯೊಬ್ಬ ಮೂತ್ರ ಮಾಡುತ್ತಿದ್ದ. ಆಗ ಆತನಿಗೆ ಬುದ್ಧಿಮಾತು ಹೇಳಿದ್ದಕ್ಕೆ ಆತ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಈ ಕುರಿತು ಪರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಸಾವು
ಗುಲ್ಬರ್ಗ: ಸೇಡಂ ತಾಲೂಕಿನ ಮುಧೋಳದಿಂದ ಆಡಕಿ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳನ್ನು ಆಡಕಿ ಗ್ರಾಮದ ಸುಜಾತಾ ಎಂದು ಗುರುತಿಸಲಾಗಿದೆ. ಈ ಕುರಿತು ವೆಂಕಟರೆಡ್ಡಿ ಯಲಗುಪಲ್ಲಿ ಅವರು ಮುಧೋಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಟಂಟಂ, ಆಟೋ, ಚಿನ್ನಾಭರಣ ಕಳ್ಳರ ಬಂಧನ, ನಗ- ನಾಣ್ಯ ವಶ
ಶಹಾಪುರ: ಅನೇಕ ಕಳ್ಳತನದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ ಪೊಲೀಸರು, ಆರೋಪಿಗಳಿಂದ 3.59 ಲಕ್ಷ ಮೌಲ್ಯದ ನಗ- ನಾಣ್ಯ ವಶಪಡಿಸಿಕೊಂಡಿದ್ದಾರೆ.
  ಪಟ್ಟಣದಲ್ಲಿ ಇತ್ತೀಚೆಗೆ ವಿವಿಧಡೆ ಸರಗಳ್ಳತನ ಟಂಟಂ, ಆಟೋ, ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದವನ್ನು ಜಿಲ್ಲಾ ಎಸ್ಪಿ ವಂಶಿಕೃಷ್ಣ, ಡಿಎಸ್ಪಿ ಕಟ್ಟಮನಿಯರವ ಮಾರ್ಗದರ್ಶನದಲ್ಲಿ ಶಹಾಪುರ ಪಿಐಜಿ ಎಸ್.ನ್ಯಾಮೇಗೌಡರ ನೇತೃತ್ವದಲ್ಲಿ ಅಪರಾದ ವಿಭಾಗದ ಪಿಎಸ್‌ಐದೊಡಪ್ಪ, ಪಿಸಿಗಳ ತಂಡ ಕಾರ್ಯಚರಣೆ ನೆಡೆಸಿ ತಾಲೂಕಿನ ಮಡ್ನಾಳ ಹತ್ತಿರ ಬಂಧಿಸಿದ್ದಾರೆ.
  ಆರೋಪಿಗಳಾದ ಹುಸೇನಸಾಬ್(23) ಸಾ.ಸಿಂಗನಳ್ಳಿ ವಿನೋದ(22) ಸಾ.ಉಕ್ಕಿನಾಳ ತಾಂಡಾ ಅಶೋಕ(18) ಸಾ. ಉಕ್ಕಿನಾಳ ತಾಂಡಾ ಇವರನ್ನು ಬಂಧಿಸಿ ಅವರಿಂದ 9 ಬೈಕ್, ಟಂಟಂ, ಆಟೋ, 10 ಗ್ರಾಂ ಬಂಗಾರ, ಒಟ್ಟು 3 ಲಕ್ಷದ 59 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಸಾಧನೆಯಿಂದ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments