ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಸ್ಯೆಗಳ ಸುಳಿಯಲ್ಲಿ ರೈತರು: ಕಾಶಿನಾಥ

Vishwanath S
Updated On : 26 Dec 2013, 11:25 am

ಶಹಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರೈತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಮಳೆಯ ಅನಿಶ್ಚಿತತೆ, ಅಕಾಲಿಕ ಹಾಗೂ ಅಸಮರ್ಪಕ ವಿತರಣೆ ರೈತರ ಬಾಳಿನೊಂದಿಗೆ ಕಣ್ಣು ಮುಚ್ಚಾಲೆ ಆಟವಾಡುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕಾಶಿನಾಥ.ಎಂ ತಿಳಿಸಿದರು.
  ತಾಲೂಕಿನ ದೋರನಹಳ್ಳಿಯಲ್ಲಿ ತಾಲೂಕಾ ಮಟ್ಟದ ರೈತರ ದಿನಾಚರಣೆ ನಿಮಿತ್ತ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಸಲಾಯಿತು.
ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ: ರೈತರು ಕೃಷಿಯನ್ನು ಒಂದು ಕಸುಬು ಎಂದು ಪರಿಗಣಿಸದೇ ಒಂದು ಉದ್ದಿಮೆಯನ್ನಾಗಿ ಪರಿಗಣಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳಿವರಿ ಪಡೆಯಲು ಹೊಸ ತಾಂತ್ರಿಕತೆಗಳಾದ ಸಮಗ್ರ ಬೇಸಾಯಿ ಪದ್ಧತಿ, ಸಾವಯವ ಕೃಷಿ, ಸಮಗ್ರ ಪೀಡೆ ನಿರ್ವಹಣೆ ಅನುಸರಿಸಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಿ ಸಂತೋಷ ಜೀವನ ನಡೆಸಿದರೆ, ಇಂತಹ ರೈತ ದಿನಾಚರಣೆ ಆಚರಿಸಿದಕ್ಕೆ ಒಂದು ಅರ್ಥ ಬರುತ್ತದೆ ಎಂದು ಆಶಿಸಿದರು.
  ಡಾ. ಬಾಲರಾಜ ರಂಗರಾವ್ ಜಂಟಿ ಕೃಷಿ ನಿರ್ದೇಶಕರು ರೈತರನ್ನು ಉದ್ದೇಶಿಸಿ ಕೃಷಿ ಇಲಾಖೆಯಲ್ಲಿ ಅನೇಕ ಯೋಜನೆಗಳಿವೆ. ಅವುಗಳ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸೂಚಿಸಿದರು.
ಬಹುಮಾನ ವಿತರಣೆ: ಕಾರ್ಯಕ್ರಮವನ್ನು ದೋರನಹಳ್ಳಿ ಗ್ರಾಪಂ ಅಧ್ಯಕ್ಷ ಹಳ್ಳೆಪ್ಪ ಉದ್ಘಾಟಿಸಿದರು. ಕೃಷಿಯಲ್ಲಿ ವಿವಿಧ ಸಾಧನೆ ಮಾಡಿದ 5 ಜನ ರೈತರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರೈತರಾದ ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ ತೊಗರಿ ಬೆಳೆಯಲ್ಲಿ ಜಿಲ್ಲಾಮಟ್ಟಕ್ಕೆ 2ನೇ ಬಹುಮಾನ, ಡಾ. ವಿಜಯಕುಮಾರ ಗುಂಡಳ್ಳಿ ತಾಂಡ ಸಾವಯವ ಕೃಷಿಯಲ್ಲಿ ತೋಟಗಾರಿಕೆ, ನಾಗರತ್ನ ಗಂಡ ವಿಶ್ವನಾಥರೆಡ್ಡಿ ಯಕ್ಷಿಂತಿ ಸಾವಯವ ಕೃಷಿ ಮತ್ತು ರೈತ ಮಹಿಳೆಯರ ಗುಂಪು ರಚನ ವಿಜಯಕುಮಾರ ತಿರುಮಾಲಚಾರ್ಯ ತಿಪ್ಪನಳ್ಳಿ, ಸಾಧನೆ ಏಲಕ್ಕಿ ಬಾಳೆ ಬೇಸಾಯ, ಹಣಮಂತ್ರಾಯ ಭೀಮರಾಯ ನರಸನಾಯಕ ಹಳಿಸಗರ ಜೇನು ಕೃಷಿ.
  ರಾಜೇಶ್ವರಿ ನಾಡಗೌಡ ಸ್ವಾಗತಿಸಿದರು. ಸಿದ್ದಣ್ಣ ಬಂಡರಗೊಟಿ ನಿರೂಪಿಸಿದರು. ಶರಣಬಸವ ವಂದಿಸಿದರು. ಈ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಜನ ರೈತರು ಭಾಗವಹಿಸಿದ್ದರು. ಅಲ್ಲದೇ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಶಹಾಪುರ ತಾಲೂಕಿನ ಸದಸ್ಯರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ರೈತ ಅನುವುಗಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement